ಕಾಸರಗೋಡಿನ ಮಸೀದಿಗೆ ಕುದುರೆ: ತುಮಕೂರಿನ ಭಕ್ತನಿಂದ ಹರಕೆ ರೂಪದಲ್ಲಿ ಸಮರ್ಪಣೆ

horse
Published on

ಕಾಸರಗೋಡು: ಇಲ್ಲಿನ ತಳಂಗರೆ ಮಾಲಿಕ್ ದೀನಾರ್ ದೊಡ್ಡ ಜಮಾಅತ್ ಮಸೀದಿಗೆ ತುಮಕೂರು ನಿವಾಸಿ ಮಹಮ್ಮದ್ ಶಂಸೀರ್ ಎಂಬ ಭಕ್ತ ಕುದುರೆಯನ್ನು ಹರಕೆ ರೂಪದಲ್ಲಿ ಸಮರ್ಪಿಸಿದ್ದಾರೆ.

ತನ್ನ ಬೇಡಿಕೆಯೊಂದು ಈಡೇರಿದಲ್ಲಿ ಹರಕೆ ನೀಡುವುದಾಗಿ ಕೇಳಿಕೊಂಡಂತೆ ನಡೆದುಕೊಂಡಿರುವುದಾಗಿ ಶಂಸೀರ್ ತಿಳಿಸಿದ್ದಾರೆ. ಮಸೀದಿಗೆ ಸಮರ್ಪಣೆಯಾದ ಕುದುರೆಯನ್ನು ನೋಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಹರಕೆ ರೂಪದಲ್ಲಿ ಬಂದ ಕುದುರೆಯನ್ನು ಹರಾಜು ಹಾಕಲು ಮಸೀದಿ ಸಮಿತಿ ತೀರ್ಮಾನಿಸಿದ್ದು, ಇದಕ್ಕೂ ಮೊದಲು ಅರಣ್ಯ ಇಲಾಖೆ ಅನುಮತಿ ಕೇಳುವುದಾಗಿ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಚಿನ್ನ, ಬೆಳ್ಳಿ, ನಗದು ರೂಪದಲ್ಲಿ ಮಸೀದಿಗೆ ಹರಕೆ ಸಲ್ಲಿಕೆಯಾಗುತ್ತಿದ್ದು, ಇದೇ ಮೊದಲ ಬಾರಿಗೆ ಕುದುರೆ ಸಮರ್ಪಣೆ ನಡೆದಿದೆ ಎಂದು ಸಮಿತಿ ಪದಾಧಿಕಾರಿಗಳು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net