ಚೆಲುವನಾರಾಯಣಸ್ವಾಮಿಗೆ ಅಶ್ವವಾಹನೋತ್ಸವ

29mlk1
Published on
  • ಮಂಡ್ಯ : ಮೇಲುಕೋಟೆಯಲ್ಲಿ ಶುಕ್ರವಾರ ಬೆರಳೆಣಿಕೆಯ ಭಕ್ತರು ಮಾತ್ರ ಕಂಡುಬಂದರು. ಆದರೆ ಚೆಲುವನಾರಾಯಣಸ್ವಾಮಿಗೆ ಪವಿತ್ರೋತ್ಸವ ಅಂಗವಾಗಿ ಅಶ್ವವಾಹನೋತ್ಸವ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.

  • ಕಳೆದ ಸೋಮವಾರ ಪವಿತ್ರೋತ್ಸವ ಆರಂಭವಾಗಿದ್ದು, ಏಳು ದಿನಗಳ ಕಾಲ ನಡೆಯಲಿದೆ. ಪವಿತ್ರೋತ್ಸವದ ಐದನೇ ದಿನದ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಬೆಳಗ್ಗೆ 9.30ಕ್ಕೆ ಚತುರ್ವೀಧಿಗಳಲ್ಲಿ ದಿವ್ಯಪ್ರಬಂಧ ಪಾರಾಯಣ ಮಂಗಳವಾದ್ಯದೊಂದಿಗೆ ಅಶ್ವವಾಹನೋತ್ಸವ ನೆರವೇರಿತು.

  • ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ ಮಂಡಲ ಮತ್ತು ಕುಂಭಸ್ಥಾಪಿಸಿ ಎರಡೂ ವೇಳೆಯಲ್ಲೂ ವಿಶೇಷ ಪೂಜಾಕೈಂಕರ್ಯ ನೆರವೇರಿಸಲಾಗುತ್ತಿದೆ. ಪ್ರತಿದಿನ ಬೆಳಗ್ಗೆ ವಿವಿಧ ವಾಹನೋತ್ಸವಗಳು ಚೆಲುವನಾರಾಯಣಸ್ವಾಮಿಗೆ ನೆರವೇರುತ್ತಿದೆ.

  • ಪವಿತ್ರೋತ್ಸವ ಸಮಾರೋಪದ ದಿನವಾದ ಭಾನುವಾರ ಗರುಡವಾಹನೋತ್ಸವ ನೆರವೇರಲಿದೆ. ಭಕ್ತರು ಸಹ ಇಷ್ಟಾರ್ಥ ಸಿದ್ಧಿಗಾಗಿ ಗರುಡಸೇವೆ ಮಾಡಲು ಅವಕಾಶವಿದೆ ಎಂದು ಸ್ಥಾನಾಚಾರ್ಯ ಶ್ರೀನಿವಾಸನ್ ಗುರೂಜಿ ಮಾಹಿತಿ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net