ಪೇಟೆಯಲ್ಲಿ ಅಡ್ಡಾಡುತ್ತಿದ್ದ ಕುದುರೆ ವಶಕ್ಕೆ

Horse
Published on

ಉಪ್ಪಿನಂಗಡಿ: ಸತತ ಸೂಚನೆಯನ್ನು ಧಿಕ್ಕರಿಸಿ ರಸ್ತೆಗೆ ಬಿಟ್ಟ ಕುದುರೆಯನ್ನು ಉಪ್ಪಿನಂಗಡಿ ಪಿಡಿಒ ವಶಕ್ಕೆ ಪಡೆದು ಪಂಚಾಯಿತಿ ಕಚೇರಿ ಬಳಿ ಕಟ್ಟಿದ್ದಾರೆ.

ಮೂರು ಕುದುರೆಗಳು ಪೇಟೆಯಲ್ಲಿ ಅಡ್ಡಾಡುತ್ತಾ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರ ಮೇಲೆ ಆಕ್ರಮಣ ಮಾಡಿ ಹಲವರು ಗಾಯಗೊಂಡಿದ್ದರು. ಕುದುರೆಯನ್ನು ರಸ್ತೆಗೆ ಬಿಡದಂತೆ ಪಂಚಾಯಿತಿ ಹಲವು ಬಾರಿ ಮಾಲೀಕರಿಗೆ ಎಚ್ಚರಿಕೆ ನೀಡಿದರೂ ಪೇಟೆಗೆ ಬಿಟ್ಟ ಹಿನ್ನೆಲೆಯಲ್ಲಿ ಪಿಡಿಒ ವಿನ್ಸೆಂಟ್ ರೋಡ್ರಿಗಸ್ ಪಂಚಾಯಿತಿ ಸಿಬ್ಬಂದಿಯ ಸಹಕಾರದಿಂದ ಕುದುರೆಯನ್ನು ವಶಕ್ಕೆ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net