ಪಾಂಡೇಶ್ವರ ಪ್ರಧಾನ ಅಂಚೆ ಕಚೇರಿಯಲ್ಲಿ ಹಾರರ್ಸ್‌ ಆಫ್‌ ಪಾರ್ಟಿಶನ್‌ ಪ್ರದರ್ಶನ

mng-aug12-post4
Published on

ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಭಾರತೀಯ ಅಂಚೆ ಇಲಾಖೆಯ ಮಂಗಳೂರು ವಿಭಾಗದ ವತಿಯಿಂದ ಭಾರತ ವಿಭಜನೆ (ಹಾರರ್ಸ್‌ ಆಫ್‌ ಪಾರ್ಟಿಶನ್‌)ಗೆ ಸಂಬಂಧಿಸಿದ ಬರಹ, ಛಾಯಾಚಿತ್ರಗಳು, ಪತ್ರಿಕಾ ಬರಹಗಳ ಪ್ರದರ್ಶನಕ್ಕೆ ಶುಕ್ರವಾರ ಪಾಂಡೇಶ್ವರದ ಪ್ರಧಾನ ಅಂಚೆ ಕಚೇರಿಯಲ್ಲಿ ಚಾಲನೆ ನೀಡಲಾಯಿತು.
ಆ.15ರ ವರೆಗೆ ಜರುಗಲಿರುವ ಪ್ರದರ್ಶನ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ದೇಶ ಸ್ವಾತಂತ್ರ್ಯ 75ನೇ ವರ್ಷಾಚರಣೆಯ ಸಂಭ್ರಮದಲ್ಲಿದ್ದು, ಈ ವೇಳೆ ನಾವು ನಮ್ಮ ಹಿರಿಯರು ಸ್ವಾತಂತ್ರ್ಯಕ್ಕಾಗಿ ಮಾಡಿದ ಸೇವೆಯನ್ನು ನೆನಪಿಸಿಕೊಳ್ಳಬೇಕಾದ ಅಗತ್ಯವಿದೆ. ಸ್ವಾತಂತ್ರ್ಯ ಪಡೆದ ಖುಷಿಯ ಸಂದರ್ಭದಲ್ಲೇ ದೇಶ ವಿಭಜನೆಯ ಕಹಿ ನೋವನ್ನೂ ಅನುಭವಿಸಬೇಕಾಗಿ ಬಂದಿತು. ಪ್ರದರ್ಶನದಲ್ಲಿ ಅಂದಿನ ಭೀಕರತೆಯನ್ನು ನಾವು ಕಾಣಬಹುದಾಗಿದೆ ಎಂದರು.
ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ, ಸಹಾಯಕ ಅಂಚೆ ಅಧೀಕ್ಷಕ ಶ್ರೀನಾಥ್, ರೈಲ್ವೆ ಮೇಲ್ ಸರ್ವಿಸ್ ಅಧೀಕ್ಷಕ ರವೀಂದ್ರ ನಾಯಕ್, ಇಲಾಖೆ ಸಿಬ್ಬಂದಿ ಈ ವೇಳೆ ಉಪಸ್ಥಿತರಿದ್ದರು.
ಪ್ರದರ್ಶನದಲ್ಲಿ ಏನಿದೆ?
1947ರ ಆಗಸ್ಟ್ 14ರಂದು ದೇಶ ವಿಭಜನೆಯಾದ ಬಳಿಕ ಸಂಭವಿಸಿದ ಹಿಂಸಾಚಾರದ ಚಿತ್ರವನ್ನು ಸುಮಾರು 50ಕ್ಕೂ ಅಧಿಕ ಫಲಕಗಳಲ್ಲಿ ವಿವರಿಸಲಾಗಿದೆ. ದೇಶದಲ್ಲಿ ನಡೆದ ಗಲಭೆಗಳು, ಪಾಕಿಸ್ತಾನದಲ್ಲಿ ಹಿಂದುಗಳ ಮೇಲೆ ನಡೆದ ದೌರ್ಜನ್ಯಗಳಿಗೆ ಸಂಬಂಧಿಸಿದ ಬರಹಗಳಿವೆ. ಜತಗೆ ವಿವಿಧ ಆಂಗ್ಲ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳು ತಣುಕುಗಳು, ಛಾಯಾಚಿತ್ರಗಳಿವೆ. ದೇಶ ವಿಭಜನೆಯ ಬಳಿಕ ಏನು ನಡೆಯಿತು ಎನ್ನುವುದನ್ನು ಕಲ್ಪಿಸಬಹುದಾಗಿದೆ. ಆ.15ರ ಸಂಜೆ ವರೆಗೆ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರು ಕಚೇರಿ ಅವಧಿಯಲ್ಲಿ ವೀಕ್ಷಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net