ಹೊರ್ಲಾಳಿಯಲ್ಲಿ ಚಿರತೆ ಸೆರೆ, ಅರಣ್ಯ ಇಲಾಖೆ ಯಶಸ್ವಿ ಕಾರ್ಯಾಚರಣೆ

cheethah new
Published on

ಕೊಕ್ಕರ್ಣೆ: ಕುದಿ ಗ್ರಾಮದ ಹೊರ್ಲಾಳಿಯಲ್ಲಿ ಸುಧಾಕರ ಅವರ ತೋಟದಲ್ಲಿ ಹೆಬ್ರಿ ವಲಯ ಅರಣ್ಯ ಅಧಿಕಾರಿಗಳು ಇರಿಸಿದ್ದ ಕಬ್ಬಿಣದ ಪಂಜರ(ಬೋನು)ದಲ್ಲಿ ಬುಧವಾರ ಬೆಳಗ್ಗೆ ಚಿರತೆಯೊಂದು ಸೆರೆಯಾಗಿದ್ದು, ಬಳಿಕ ಕಾರ್ಯಾಚರಣೆ ಮೂಲಕ ಕುದುರೆಮುಖ ವನ್ಯಜೀವಿ ಅರಣ್ಯಕ್ಕೆ ಬಿಡಲಾಯಿತು.

ಹೆಬ್ರಿ ವಲಯ ಅರಣ್ಯ ಅಧಿಕಾರಿ ಮಾರ್ಕಂಡೇಯ, ಚೇರ್ಕಾಡಿ ಉಪವಲಯ ಅರಣ್ಯ ಅಧಿಕಾರಿ ಮಂಜು, ಹೆಬ್ರಿ ವಲಯ ಉಪ ಅರಣ್ಯ ಅಧಿಕಾರಿ, ಪ್ರಮೋದ್, ಅರಣ್ಯ ರಕ್ಷಕ ರಮೇಶ್, ದಿನೇಶ್, ವಾಹನ ಚಾಲಕ ದಿಲೀಪ್ ಸ್ಥಳೀಯರು ಉಪಸ್ಥಿತರಿದ್ದರು.

ಸತತ ಒಂದು ತಿಂಗಳಿಂದಲೂ ಸ್ಥಳೀಯ ಕೃಷಿಕ ಸುಧಾಕರ ಮನೆಯಲ್ಲಿ 30 ಕೋಳಿ ಹಾಗೂ ಎರಡು ನಾಯಿಗಳನ್ನು ಬಲಿ ಪಡೆದಿತ್ತು. ನಾಲ್ಕೂರು, ನಂಚಾರು, ಹೊರ್ಲಾಳಿ ಭಾಗಗಳಲ್ಲಿ ಕಾಡುಪ್ರಾಣಿಗಳು, ಚಿರತೆ ಹಾವಳಿ ಬಗ್ಗೆ ಸ್ಥಳೀಯರು ಭೀತಿಗೊಳಗಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net