ಹುಲ್ಲು ಹಾಕಲು ಹೋದ ವ್ಯಕ್ತಿ ಹೋರಿ ಒದ್ದಿದ್ದರಿಂದ ಸಾವು

Crime Logo
Published on

ಹಾನಗಲ್ಲ: ಹೋರಿಗೆ ನೀರು ಕುಡಿಸಿ ಹುಲ್ಲು ಹಾಕುತ್ತಿದ್ದ ಸಮಯದಲ್ಲಿ ಹೋರಿ ಒದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ತಾಲೂಕಿನ ಅಜಗುಂಡಿಕೊಪ್ಪದಲ್ಲಿ ಗುರುವಾರ ಸಂಭವಿಸಿದೆ.
ಗ್ರಾಮದ ನಾಗಪ್ಪ ಹನುಮಂತಪ್ಪ ಮರಡಿಬಸಣ್ಣನವರ (55) ಮೃತ ವ್ಯಕ್ತಿ.
ಇವರು ತಮ್ಮ ಮನೆಯ ದನದ ಕೊಟ್ಟಿಗೆಯಲ್ಲಿ ಕಟ್ಟಿದ ಹೋರಿಗೆ ನೀರು ಕುಡಿಸಿ ಹುಲ್ಲು ಹಾಕುತ್ತಿದ್ದ ಸಮಯದಲ್ಲಿ ಒದ್ದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net