

ಕಳಸ:ಹೊರನಾಡು ಶ್ರೀಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಶ್ರೀಅನ್ನಪೂರ್ಣೇಶ್ವರಿ ಅಮ್ಮನವರ ಶ್ರೀವರ್ಧುತ್ಯುತ್ಸವ ವಿಜೃಂಭಣೆಯಿಂದ ನಡೆಯಿತು.
1973ರ ಮೇ 5ರಂದು ನೂತನವಾಗಿ ನಿರ್ಮಿಸಿದ ಶಿಲಾಮಯ ದೇವಾಲಯದಲ್ಲಿ ಶ್ರೀಆದಿಶಕ್ತಿ ದೇವಿಯ ಪ್ರತಿಷ್ಠಾಪನೆ,ಶ್ರೀ ಉದ್ಬವ ಗಣಪತಿ ಸ್ವಾಮಿ ಮತ್ತು ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಮರು ಪ್ರತಿಷ್ಠಾಪನೆ ನೆರವೇರಿಸಲಾಗಿತ್ತು.ಆಪುಣ್ಯ ದಿನದ ವಧರ್ಂತ್ಯುತ್ಸವವನ್ನು ಶ್ರೀ ಜಗನ್ಮಾತೆಯ ಸನ್ನಿಧಿಯಲ್ಲಿ ವಿವಿಧ ಹೋಮಗಳು, ಪಾರಾಯಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ವಧರ್ಂತ್ಯುತ್ಸವದ ಪ್ರಯುಕ್ತ ಧರ್ಮಕರ್ತ ಜಿ.ಭೀಮೆಶ್ವರ ಜೋಷಿ ಅವರಿಂದ ಉದ್ಭವ ಗಣಪತಿ ಸ್ವಾಮಿಗೆ ಮತ್ತು ಶ್ರೀಮಾತೆಗೆ ಮಹಾ ಅಭಿಷೇಕ ನೆರವೇರಿತು. ನಂತರ ಜಗನ್ಮಾತೆ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥ ಮಹಾಗಣಪತಿ ಹೋಮ, ಚಂಡಿಕಾ ಹೋಮ, ಲಲಿತಾ ಹೋಮ, ಲಕ್ಷ್ಮೀನಾರಾಯಣ ಹೃದಯ ಹೋಮ, ರಾಮತಾರಕ ಹೋಮ, ಅನ್ನಪೂರ್ಣ ಮೂಲಮಂತ್ರ ಹೋಮ, ಬಾಲತ್ರಿಪುರ ಸುಂದರಿ ಹೋಮ, ಗಾಯತ್ರಿ ಹೋಮ, ನವಗ್ರಹ ಹೋಮ, ರುದ್ರಹೋಮ, ವೇದ ಪಾರಾಯಣ, ರಾಶಿಪೂಜೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ನಾಟ್ಯ ಮಯೂರಿ ವಿದುಷಿ ಶ್ರೀಮತಿ ಲಕ್ಷ್ಮೀಗುರುರಾಜ್ ಇವರ ಶಿಷ್ಯೆ ವಿದುಷಿ ಕುಮಾರಿ ಅರ್ಪತಾ ಹೆಗಡೆ ಅವರಿಂದ ಭರತನಾಟ್ಯ ನಡೆಯಿತು.