

ಹುಬ್ಬಳ್ಳಿ: ತಾಲೂಕಿನ ವೀರಶೈವ ಲಿಂಗಾಯತ ಒಳ ಪಂಗಡಗಳ ಸಂಘಟನೆ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮೂರು ದಶಕದಿಂದ ಸೇವೆ ಸಲ್ಲಿಸುತ್ತಿರುವ ಹೊರಕೇರಿ ಕುಟುಂಬದವರಿಗೆ ಗೌರವ ಸನ್ಮಾನ ನೀಡಲಾಯಿತು.
ಹೊರಕೇರಿ ಕುಟುಂಬದ ಐವರು ಸದಸ್ಯರಾದ ಡಾ. ಲಿಂಗರಾಜ ಹೊರಕೇರಿ, ಡಾ. ಮಹೇಶ, ಡಾ. ಸುರೇಶ, ಶಕುಂತಲಾ ಹಾಗೂ ಜಯಶ್ರೀ ಅವರನ್ನು ಸಂಸದ ಜಗದೀಶ ಶೆಟ್ಟರ್, ಶಾಸಕ ಮಹೇಶ ಟೆಂಗಿನಕಾಯಿ ಅವರು ಗೌರವಿಸಿದರು.
ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ರುದ್ರಾಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಮಲ್ಲಿಕಾರ್ಜುನ ಸಾವಕಾರ, ಪ್ರಕಾಶ ಬೆಂಡಿಗೇರಿ ಇತರರು ಇದ್ದರು.