ಬಡವರ ಆಶಾಕಿರಣ ಡಿ. ದೇವರಾಜ ಅರಸು

rtl 3
Published on

ರಟ್ಟಿಹಳ್ಳಿ: ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಭೂಸುಧಾರಣೆ ಕಾಯ್ದೆ ಜಾರಿಗೆ, ಜೀತ ಪದ್ಧತಿ ರದ್ದು ಮಾಡುವ ಮೂಲಕ ಬಡವರ ಆಶಾಕಿರಣವಾಗಿ, ಹಿಂದುಳಿದ ವರ್ಗಗಳ ನಾಯಕರಾಗಿ ಜನಮಾನಸದಲ್ಲಿ ಉಳಿದಿದ್ದಾರೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 108ನೇ ಜಯಂತ್ಯುತ್ಸವ ಆಚರಣೆಯಲ್ಲಿ ಮಾತನಾಡಿದರು.
ಬಡವರ ಉತ್ತಮ ಜೀವನಕ್ಕೆ ಅನೇಕ ಕನಸುಗಳನ್ನು ಕಂಡಿದ್ದ ದೇವರಾಜ ಅರಸು ಅವರು ಉಳುವವನೇ ಒಡೆಯ ಎನ್ನುವ ಭೂಸುಧಾರಣೆ ಕಾಯ್ದೆ ಜಾರಿಗೆ ತಂದಿರು. ಬಡವರಿಗಾಗಿ ಆಶ್ರಯ ಯೋಜನೆ ಸೇರಿದಂತೆ ಸಾಮಾಜಿಕ ಕ್ರಾಂತಿಯ ಹರಿಕಾರರಾಗಿ ಅವರು ಸಲ್ಲಿಸಿದ ಸೇವೆಯನ್ನು ನಾವು ಅನುಕರಿಸಿ ಉಳಿಸಿಕೊಂಡು ಹೋಗಬೇಕಾಗಿದೆ ಎಂದರು.

ತಹಸೀಲ್ದಾರ್ ಕೆ.ಗುರುಬಸವರಾಜ ಮಾತನಾಡಿ, ಶೋಷಿತ ವರ್ಗಕ್ಕೆ ಉಪಯುಕ್ತವಾದ ಯೋಜನೆಗಳನ್ನು ಡಿ.ದೇವರಾಜ ಅರಸು ಅವರು ಜಾರಿಗೆ ತಂದಿದ್ದರು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಹೋಗಬೇಕು ಎಂದರು.

ಉಪನ್ಯಾಸಕ ಡಾ.ಸಿ.ಎಸ್. ಕಮ್ಮಾರ ಡಿ.ದೇವರಾಜ ಅರಸು ಅವರ ಕುರಿತು ಉಪನ್ಯಾಸ ನೀಡಿದರು. ಪ.ಪಂ. ಮುಖ್ಯಾಧಿಕಾರಿ ಸಂತೋಷ ಚಂದ್ರಖೇರ, ತಾ.ಪಂ. ಸಹಾಯಕ ನಿರ್ದೇಶಕ ದೇವರಾಜ ಸಣ್ಣಕಾರ್ಗಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಎಂ. ಪಾಟೀಲ, ಕೆ.ಶಿವಮೂರ್ತಿ, ಶಿಕ್ಷಣ ಸಂಯೋಜಕ ಎನ್.ವಿ. ನಾಯಕ, ಪಶು ವೈದ್ಯಾಧಿಕಾರಿ ರಾಘವೇಂದ್ರ ಎಲಿವಾಳ, ಎಎಸ್‌ಐ. ಗುತ್ತ್ಯಾಳವರ, ಹನುಮಂತ ಓಲೇಕಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net