ಬಾಕಿ ಉಳಿಸಿಕೊಂಡಿರುವ ವೇತನ ಪಾವತಿಸಿ: ಹಾಪ್‌ಕಾಮ್ಸ್ ನಿವೃತ್ತ ನೌಕರ ತೈಲೂರು ಮಲ್ಲರಾಜು ಒತ್ತಾಯ

Hopcoms Retired Employees Press Conference Demand Salary Release mandya
Published on

ಮಂಡ್ಯ: ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿಯೂ 2012ರಿಂದ 2019ರವರೆಗೆ ಬಾಕಿ ಉಳಿಸಿಕೊಂಡಿರುವ ತನ್ನ ವೇತನವನ್ನು ಒಂದು ವಾರದೊಳಗೆ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಕಚೇರಿ ಎದುರು ವಿಷ ಸೇವನೆ ಮಾಡುವುದಾಗಿ ಹಾಪ್‌ಕಾಮ್ಸ್ ನಿವೃತ್ತ ನೌಕರ ತೈಲೂರು ಮಲ್ಲರಾಜು ಎಚ್ಚರಿಕೆ ನೀಡಿದರು.

ವೇತನಕ್ಕಾಗಿ ಹಲವು ವರ್ಷದಿಂದ ಹೋರಾಟ ಮಾಡಿಕೊಂಡು ಬಂದಿದ್ದೇನೆ. ನ್ಯಾಯಾಲಯದಲ್ಲಿಯೂ ನನ್ನ ಪರವಾಗಿಯೇ ಆದೇಶ ಬಂದಿದೆ. ಆದಾಗ್ಯೂ ಆಡಳಿತ ಮಂಡಳಿ ನಿರ್ಲಕ್ಷೃ ಮಾಡುತ್ತಿದೆ. ಇದರೊಂದಿಗೆ ಮಾನಸಿಕ ಹಿಂದೆ ಕೊಡುತ್ತಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ನ್ಯಾಯ ಕೊಡಿಸಬೇಕು. ಒಂದು ವೇಳೆ ಮತ್ತೆ ಅನ್ಯಾಯವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.

ಹಾಪ್‌ಕಾಮ್ಸ್‌ನಲ್ಲಿ ಅವ್ಯವಹಾರ ಮಿತಿ ಮೀರಿದೆ. ಸಂಸ್ಥೆಗೆ ಮೋಸ ಮಾಡಿ ಶೇ.40ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ಹಣ್ಣುಗಳಿಗೆ ಖಾಸಗಿ ಮಳಿಗೆ ದರಕ್ಕಿಂತಲೂ ಹೆಚ್ಚಿನ ದರವನ್ನು ಹಾಪ್‌ಕಾಮ್ಸ್‌ನಲ್ಲಿ ವಿಧಿಸಲಾಗುತ್ತಿದೆ. ನಕಲಿ ಬಿಲ್‌ಗಳನ್ನು ಕೊಟ್ಟು ವಂಚನೆ ಮಾಡಲಾಗುತ್ತಿದೆ. ಆದ್ದರಿಂದ ಈ ಎಲ್ಲದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಹಾಪ್‌ಕಾಮ್ಸ್ ಆಡಳಿತ ಮಂಡಳಿ ಸದಸ್ಯ ಗೋಪಾಲಗೌಡ, ರೈತ ಕರಿಯಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net