

ಹೂವಿನಹಡಗಲಿ: ಸಾರ್ವಜನಿಕರು ಕಡ್ಡಾಯವಾಗಿ ಮತದಾರರ ಗುರುತಿನಚೀಟಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿ ಎಂದು ಪುರಸಭೆ ಅಧ್ಯಕ್ಷ ಜ್ಯೋತಿಮಲ್ಲಣ್ಣ ತಿಳಿಸಿದರು.
ಅಧಿಕಾರಿಗಳೊಂದಿಗೆ ಶುಕ್ರವಾರ ನಗರದ 1 ರಿಂದ 3ನೇ ವಾರ್ಡ್‌ಗಳಲ್ಲಿನ ಮನೆಗಳಿಗೆ ತೆರಳಿ ಈ ಕುರಿತು ಮಾಹಿತಿ ನೀಡಿದರು. ವಾರ್ಡ್ ಸಮಸ್ಯೆಗಳನ್ನು ಆಲಿಸಿದ ನಂತರ ಕುಂದು-ಕೊರತೆಗಳನ್ನು ನಿವಾರಿಸಲು ಸದಸ್ಯರು ಮತ್ತು ಮುಖ್ಯಾಧಿಕಾರಿಗೆ ಸೂಚನೆ ನೀಡಿದರು. ಪುರಸಭೆ ಉಪಾಧ್ಯಕ್ಷ ತಿಮ್ಮಣ್ಣ, 2ನೇ ವಾರ್ಡ್ ಸದಸ್ಯೆ ಗಡಿಗಿ ಬಸಮ್ಮ, 3ನೇ ವಾರ್ಡ್ ಸದಸ್ಯೆ ಜ್ಯೋತಿ ಪವನ್‌ಕುಮಾರ್ ಇತರರು ಇದ್ದರು.