ಹನ್ನೊಂದು ಜನರಿಗೆ ಡೆಂಘೆ ದೃಢ

Dengue
Published on

ಹೂವಿನಹಡಗಲಿ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದವರಲ್ಲಿ ಮಂಗಳವಾರ 11 ಡೆಂಘೆ ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾ ನೋಡಲ್ ಅಧಿಕಾರಿ ಡಾ.ರಾಧಿಕಾ ತಿಳಿಸಿದ್ದಾರೆ.

ಪಟ್ಟಣದ ಒಬ್ಬರು ಸೇರಿ ತಾಲೂಕಿನ ಇತರೆ ಭಾಗಗಳಲ್ಲಿ 10 ಜನಕ್ಕೆ ಡೆಂಘೆ ದೃಢಪಟ್ಟಿದೆ. ಇವರಲ್ಲಿ ಮೂವರು 6 ವರ್ಷದೊಳಗಿನ ಮಕ್ಕಳಿದ್ದು ಉಳಿದವರು ವಯಸ್ಕರಾಗಿದ್ದಾರೆ. 282 ಜನರನ್ನು ಪ್ರಾಥಮಿಕ ಕಿಟ್ ಬಳಸಿ ಡೆಂಘೆ ಜ್ವರ ಪರೀಕ್ಷೆ ನಡೆಸಲಾಗಿತ್ತು. ಎಲ್ಲರ ಮಾದರಿಗಳನ್ನು ಜಿಲ್ಲಾ ಆಸ್ಪತ್ರೆಗೆ ಕಳಿಸಿಕೊಡಲಾಗಿತ್ತು. ಜ್ವರಪೀಡಿತರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಈಗಾಗಲೆ ಎಲ್ಲರೂ ಗುಣಮುಖರಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ತಾಲೂಕು ಆರೋಗ್ಯಾಧಿಕಾರಿ ಡಾ. ಸಪ್ನಾ ಕಟ್ಟಿ ಮಾತನಾಡಿ, ಡೆಂಘೆ ಜ್ವರ ಪ್ರಕರಣ ಪತ್ತೆಯಾಗಿರುವ ಭಾಗಗಳಲ್ಲಿ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸುವಂತೆ ಗ್ರಾಪಂಗಳ ಅಧಿಕಾರಿಗಳಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಲಾಗಿದೆ. ಗ್ರಾಪಂ ಮಟ್ಟದ ಅಧಿಕಾರಿಗಳ ನೆರವಿನಿಂದ ಜ್ವರ ಕಾಣಿಸಿಕೊಂಡವರ ಮನೆಗೆ ತೆರಳಿ ಮನೆಯ ಸುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವಂತೆ ಸಲಹೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net