ಬೆಂಬಲ ಬೆಲೆಯ ಖರೀದಿ ಕೇಂದ್ರಕ್ಕೆ ಬೀಗದಿಂದಾಗಿ ಮೂರು ದಿನದಿಂದ ನಿಂತಲ್ಲೇ ನಿಂತ ಫಸಲು ತುಂಬಿದ ಟ್ರಾೃಕ್ಟರ್‌ಗಳು

09042021 Hadagali formars protest
Published on

ಹೂವಿನಹಡಗಲಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಜೋಳ ಮತ್ತು ರಾಗಿ ಖರೀದಿ ಕೇಂದ್ರಕ್ಕೆ ಕಳೆದ ಮೂರು ದಿನಗಳಿಂದ ಬೀಜ ಜಡಿದಿರುವುದನ್ನು ಖಂಡಿಸಿ ರೈತರು ಶುಕ್ರವಾರ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ರಾಗಿ ಮತ್ತು ಜೋಳವನ್ನು ಬೆಂಬಲ ಬೆಲೆಗೆ ಮಾರುವಂತೆ ಸರ್ಕಾರ ಆದೇಶಿಸಿದ್ದರೂ ಇಲ್ಲಿನ ಖರೀದಿ ಕೇಂದ್ರಕ್ಕೆ ಬೀಗಿ ಜಡಿದಿರುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಿರಾಕೊರನಹಳ್ಳಿ ರೈತ ಊರಾಳ ಈರಪ್ಪ ಮಾತನಾಡಿ, ತಾಲೂಕಿನ ಹಿರೇಹಡಗಲಿ, ಚಿಕ್ಕಕೊಳಚಿ, ಹಿರೇಕೊಳಚಿ, ಮಾಗಳ, ಉಪನಾಯ್ಕನಹಳ್ಳಿ ಸೇರಿ ಹಲವೆಡೆಯ ರೈತರು ಜೋಳ, ರಾಗಿಯನ್ನು ಟ್ರಾೃಕ್ಟರ್‌ನಲ್ಲಿ ತುಂಬಿ ಎಪಿಎಂಸಿಗೆ ತಂದಿದ್ದಾರೆ. ಆದರೆ, ಇಲ್ಲಿನ ಖರೀದಿ ಕೇಂದ್ರಕ್ಕೆ ಬೀಗ ಜಡಿದಿದ್ದರಿಂದ ಗಾಡಿಗಳು ನಿಂತಲ್ಲೇ ನಿಂತಿವೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಒಬ್ಬರೂ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಸ್ಥಳಕ್ಕೆ ದೌಡಾಯಿಸಿದ ತಹಸೀಲ್ದಾರ್ ವಂದನಾ ಭಟ್, ಹಮಾಲರ ವೇತನ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ರೈತರ ಫಸಲು ವಾಹನದಲ್ಲಿ ಉಳಿದಿವೆ. ಶೀಘ್ರವೇ ವೇತನ ಬಿಡುಗಡೆ ಮಾಡಿ ಸಮಸ್ಯೆ ಸರಿಪಡಿಸುತ್ತೆ. ಇನ್ನು ಮುಂದೆ ಇಂತಹ ತೊಂದರೆ ಆಗದಂತೆ ಎಚ್ಚರ ವಹಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net