ಮಾಸಿಕ ವೇತನ 12 ಸಾವಿರಕ್ಕೆ ಏರಿಕೆ ಮಾಡಿ

28032022 Hadagali Asha workers protest
Published on


ಹೂವಿನಹಡಗಲಿ: ಸಂಪೂರ್ಣ ಪ್ರೋತ್ಸಾಹ ಧನ ಸೇರಿ ವಿವಿಧ ಬೇಡಿಕೆಗಳಿಗೆ ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ಶಾಸ್ತ್ರೀ ವೃತ್ತದಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಯಿತು.

ಸಂಘಟನೆಯ ತಾಲೂಕು ಅಧ್ಯಕ್ಷೆ ಎ.ಚನ್ನವೀರಮ್ಮ ಮಾತನಾಡಿ, ಆಶಾ ಕಾರ್ಯಕರ್ತೆಯರ ಎಲ್ಲ ಚಟುವಟಿಕೆಗಳಿಗೂ ಮಾಸಿಕ ವೇತನ 12 ಸಾವಿರಕ್ಕೆ ಏರಿಕೆ ಮಾಡಬೇಕು. ತೀವ್ರ ಅನಾರೋಗ್ಯ ತೊಂದರೆಯಾದರೆ ಮೂರು ತಿಂಗಳು ನಿಶ್ಚಿತ ಗೌರವ ಧನ ಮತ್ತು ನಿಗದಿತ ಪ್ರೋತ್ಸಾಹ ಧನ ನೀಡಲು ಆದೇಶ ಮಾಡಬೇಕೆಂದು ಒತ್ತಾಯಿಸಿದರು.

ಆಶಾ ಕಾರ್ಯಕರ್ತೆಯರಿಗೆ ಸೀರೆ ಬದಲಾಗಿ ಚೂಡಿದಾರ ಸಮವಸ್ತ್ರ ಕೊಡಬೇಕು. ಕಾರ್ಯಕರ್ತೆಯವರು ಆಶಾ ನಿಧಿ ಪೋರ್ಟಲ್ ತೊಂದರೆಯಿಂದಾಗಿ ಇಲ್ಲಿಯವರೆಗೆ ಆದ ಆರ್ಥಿಕ ನಷ್ಟವನ್ನು ಪರಿಹಾರ ರೂಪದಲ್ಲಿ ಕೊಡಬೇಕು. ನಮ್ಮ ಬೇಡಿಕೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಪರಿಶೀಲನೆ ಮಾಡಿ ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net