ಹಡಗಲಿಯಲ್ಲಿ ರಾಜ್‌ಭಾಗ್ ಉರುಸ್, ಕುಸ್ತಿ-ಟಗರು ಪಂದ್ಯಾವಳಿ ರದ್ದು

15032020 Hadagali Wrestling-Tagaru tournament Cancel
Published on

ಹೂವಿನಹಡಗಲಿ: ಡಿಸಿ ಆದೇಶ ಮೇರೆಗೆ ತಹಸೀಲ್ದಾರ್ ಕೆ.ವಿಜಯಕುಮಾರ್ ಶನಿವಾರ ತಹಸಿಲ್ ಕಚೇರಿಯಲ್ಲಿ ಅಧಿಕಾರಿಗಳ ತುರ್ತು ಸಭೆ ನಡೆಸಿದರು.

ಬಳಿಕ ಮಾತನಾಡಿದ ಅವರು, ಪಟ್ಟಣದಲ್ಲಿ ರಾಜ್‌ಭಾಗ್ ಉರುಸ್ ಆರಂಭವಾದ್ದರಿಂದ ಜನ ಸಂದಣಿ ಹೆಚ್ಚಿರುವುದರಿಂದ ವೈರಸ್ ಬಗ್ಗೆ ಪುರಸಭೆ ವಾಹನದ ಮೂಲಕ ಜಾಗೃತಿ ಮೂಡಿಸಿ ಅಂಗಡಿ ಮುಂಗಟ್ಟು ಮುಚ್ಚಿಸಲಾಗುವುದು. ಜತೆಗೆ ಮಾ.15,16 ರಂದು ನಡೆಯಲಿರುವ ಕುಸ್ತಿ, ಟಗರು ಪಂದ್ಯಾವಳಿ ರದ್ದು ಮಾಡಲಾಗುವುದು. ಅಲ್ಲದೆ, ಚಿತ್ರ ಮಂದಿರಗಳ ಬಳಿ 144 ಸೆಕ್ಷನ್ ಜಾರಿ ಗೊಳಿಸಲಾಗಿದೆ ಎಂದರು.


ಕರೊನಾ ಬಗ್ಗೆ ಸರ್ಕಾರ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಯಾವುದೇ ಮುಲಾಜಿಲ್ಲದೆ ಪ್ರತಿಯೊಬ್ಬರೂ ಕಾನೂನು ಪಾಲಿಸಬೇಕು. ನೂರು ಹಾಸಿಗೆ ಆಸ್ಪತ್ರೆಯಲ್ಲಿ ಕರೊನಾ ಶಂಕಿತರಿಗೆ ಮೂರು ಬೆಡ್ ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.


ತಾಲೂಕು ವೈದ್ಯಾಧಿಕಾರಿ ಬದ್ಯಾನಾಯ್ಕ, ಆರೋಗ್ಯ ನಿರೀಕ್ಷಕ ಶ್ರೀನಿವಾಸ್, ತಾಪಂ ಇಒ ಸೋಮಶೇಖರ್, ಪಿಎಸ್‌ಐ ಎಸ್.ಪಿ.ನಾಯ್ಕ, ಗ್ರೇಡ್ 2 ತಹಸೀಲ್ದಾರ್ ಪ್ರಭಾಕರ ಗೌಡ, ಉರುಸ್ ಸಮಿತಿಯ ಸಿ.ಚಾಂದ್ ಸಾಬ್, ಕಾಗದ ಗೌಸ್ ಮೊಹಿದ್ದೀನ್, ದಾವಲ್ ಮಲ್ಲಿಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net