ಮತ್ತೆ ಕಾಂಗ್ರೆಸ್ ಸೇರುವ ಮಾತಿಲ್ಲ; ಪೌರಾಡಳಿತ ಹಾಗೂ ಸಣ್ಣ ಕೈಗಾರಿಕೆಗಳ ಸಚಿವ ಎಂ.ಟಿ.ಬಿ ನಾಗರಾಜ್ ಸ್ಪಷ್ಟನೆ

07102022 hadagali Minister MTB Nagaraj visit to mylar
Published on

ಹೂವಿನಹಡಗಲಿ : ಕಾಂಗ್ರೆಸ್ ತೊರೆದು ಬಂದ ಮೇಲೆ ಮತ್ತೆ ಆ ಪಕ್ಷ ಸೇರುವ ಮಾತೇ ಇಲ್ಲ ಎಂದು ಪೌರಾಡಳಿತ ಹಾಗೂ ಸಣ್ಣ ಕೈಗಾರಿಕೆಗಳ ಸಚಿವ ಎಂ.ಟಿ.ಬಿ ನಾಗರಾಜ್ ಹೇಳಿದರು.ತಾಲೂಕಿನ ಶ್ರೀಕ್ಷೇತ್ರ ಮೈಲಾರ ಗ್ರಾಮದ ಮೈಲಾರ ಲಿಂಗೇಶ್ವರ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಶ್ರೀ ಕಾಗಿನೆಲೆ ಕನಕ ಗುರು ಪೀಠದ ಮೈಲಾರ ಶಾಖಾ ಮಠದಲ್ಲಿ ಪರ್ತಕರ್ತರೊಂದಿಗೆ ಮಾತನಾಡಿದರು.

ರಾಜ್ಯ ಮತ್ತು ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಜನಪರ ಕೆಲಸ ಮಾಡುತ್ತಿದೆ. ಕೋವಿಡ್ ವೇಳೆ ಆದ ಸಮಸ್ಯೆಯನ್ನು ಸಮರ್ಪಕವಾಗಿ ನಿಭಾಯಿಸಿದೆ. ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿಯಲ್ಲಿ ರೈತರು, ಜನರ ಪರ ನಿಂತು ಕೆಲಸ ಮಾಡಿದೆ. ಮುಂದಿನ ದಿನಗಳಲ್ಲೂ ಬಿಜೆಪಿ ಸರ್ಕಾರ ಜನಪರವಾಗಿ ಕೆಲಸ ಮಾಡಲಿದೆ ಎಂದರು.

ಸಮುದಾಯದ ವಿಷಯ ಬಂದಾಗ ಮಾಜಿ ಸಿಎಂ ಸಿದ್ದರಾಯ್ಯ ಜತೆ ನಾನು ಉತ್ತಮ ಸಂಬಂಧವನ್ನು ಹೊಂದಿದ್ದೇನೆ. ಅವರ ಬಗ್ಗೆ ನನಗೆ ಈಗಲೂ ಅಭಿಮಾನವಿದೆ. ಆದರೆ, ಅವರನ್ನು ಬಿಟ್ಟು ಬಂದಿದ್ದೇನೆ ಎಂದ ಮೇಲೆ ನೋವು ಎಲ್ಲಿರುತ್ತದೆ. ಕಾಂಗ್ರೆಸ್‌ನವರು ನನ್ನು ಪಕ್ಷಕ್ಕೆ ಕರೆದಿಲ್ಲ. ಒಂದು ವೇಳೆ ಕರೆದರೂ ನಾನು ಹೋಗುವುದೂ ಇಲ್ಲ. ಬಿಜೆಪಿಯನ್ನು ತೊರೆಯುವ ಸಂದರ್ಭ ಬಂದರೆ ನನ್ನ ರಾಜಕೀಯ ನಿವೃತ್ತಿ ದಿನಗಳಲ್ಲಿ ಮಾತ್ರ. ಅಲ್ಲಿಯವರೆಗೂ ನಾನು ಈ ಪಕ್ಷದಲ್ಲೇ ಮುಂದುವರಿಯುವೆ ಎಂದರು.

ಪೇಸಿಎಂ ಬಗ್ಗೆ ವಿಪಕ್ಷದವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಸಾಕ್ಷಿಗಳಿದ್ದರೆ ಮಾತ್ರ ಅಂತಹ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯ. ಭಾರತ್ ಜೋಡೋ ಯಾತ್ರೆ ಅವರ ಕೆಲಸ. ಅದನ್ನು ಅವರು ಮಾಡುತ್ತಾರೆ. ರಾಜಕೀಯದಲ್ಲಿ ಇಂತಹ ಯಾತ್ರೆಗಳು ಇರುವುದು ವಿಶೇಷ ಏನೂ ಅಲ್ಲ ಎಂದರು. ಮುಖಂಡರಾದ ಈಟಿ ಲಿಂಗರಾಜು, ರಾಘವೇಂದ್ರ, ಹನುಮಂತ, ಶಿರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net