ಯಶಸ್ವಿನಿ ಯೋಜನೆ ಮರು ಜಾರಿಗೆ ಸರ್ಕಾರದ ಗಮನ ಸೆಳೆದಿರುವೆ: ಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹೇಳಿಕೆ

27122021 Hadagli shoping comple open
Published on

ಹೂವಿನಹಡಗಲಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧಿಕಾರಿಗಳು ಪಾರದರ್ಶಕವಾಗಿ ಆಡಳಿತ ನಡೆಸಬೇಕು ಎಂದು ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಹೇಳಿದರು.

ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ವಾಣಿಜ್ಯ ಮಳಿಗೆಗಳನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ರೈತರು ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳಲು ಸಹಕಾರ ಸಂಘ ಸಹಕಾರ ಅಗತ್ಯವಿದೆ. ಸಂಘದ ಸದಸ್ಯ ರೈತರು ಮರಣ ಹೊಂದಿದರೆ ಅವರಿಗೆ ವಿಶೇಷವಾಗಿ 5 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ. ಕೃಷಿಕರು ಸಕಾಲಕ್ಕೆ ಸಾಲವನ್ನು ಕಟ್ಟಿದರೆ ಸಂಘವೂ ಬೆಳೆಯುತ್ತದೆ ಎಂದ ಅವರು, ಸಹಕಾರ ಕ್ಷೇತ್ರ ರೈತರ ಸಂಜೀವಿನಿ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಯಶಸ್ವಿನಿ ಯೋಜನೆ ಜಾರಿಗೆ ತಂದಿದ್ದರಿಂದ ರೈತ ಕುಟುಂಬಗಳಿಗೆ ಅನುಕೂಲವಾಗಿತ್ತು. ಆ ಯೋಜನೆ ಮತ್ತೆ ಜಾರಿಗೊಳಿಸಲು ಸರ್ಕಾರದ ಗಮನ ಸೆಳೆದಿದ್ದೇನೆ ಎಂದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಐಗೋಳ್ ಚಿದಾನಂದ ಮಾತನಾಡಿದರು. ನಿರ್ದೇಶಕರಾದ ರಾಮಸ್ವಾಮಿ ಪಕ್ಕೀರಪ್ಪ, ಕಲೆಗಾರ ಮೈನುದ್ದೀನ್, ಇರ್ಫಾನ್, ಟಿ.ಮಹಾಂತೇಶ, ಬಿಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಮಲ್ಲಿಕಾರ್ಜುನ ಕಂಬಾರ, ಅರವಳ್ಳಿ ವೀರಣ್ಣ, ಸಿಇಒ ಜಿ.ಎಸ್. ಕೊಟ್ರೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net