ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ: ಹಿರೇಹಡಗಲಿ ಪೊಲೀಸರ ಕಾರ್ಯಾಚರಣೆ

arrest
Published on

ಹೂವಿನಹಡಗಲಿ: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಶನಿವಾರ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಪಟ್ಟಣದ ಕಿರಣ್, ದಾಸರಹಳ್ಳಿ ತಾಂಡಾದ ಪ್ರತಾಪ, ಕೂಡ್ಲಿಗಿ ತಾಲೂಕಿನ ಇಮ್ಲಾಪುರದ ತಿಮ್ಮಣ್ಣ ಬಂಧಿತರು. ಅವರಿಂದ 160 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. ಹರಪನಹಳ್ಳಿ ವಿಭಾಗದ ಡಿವೈಎಸ್ಪಿ ಮಲ್ಲೇಶನಾಯ್ಕ ದೊಡ್ಡಮನಿ ಮಾರ್ಗದರ್ಶನದಲ್ಲಿ ಸಿಪಿಐ ರಾಮರೆಡ್ಡಿ, ಹಿರೇಹಡಗಲಿ ಠಾಣೆ ಪಿಎಸ್‌ಐ ಅರುಣ್ ಕುಮಾರ ರಾಠೋಡ್ ಹಾಗೂ ದಾಳಿ ನಡೆಸಿದ್ದರು. ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net