ಇಂದ್ರಧನುಷ್ ಲಸಿಕೆ ಕಡ್ಡಾಯ ಹಾಕಿಸಿ

07032022 Hadagali vaccine indradhanush
Published on

ಹೂವಿನಹಡಗಲಿ: ಪ್ರತಿಯೊಬ್ಬರೂ ತಮ್ಮ ತಮ್ಮ ಮಕ್ಕಳಿಗೆ ಮಿಷನ್ ಇಂದ್ರ ದನುಷ್ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಬೇಕು ಎಂದು ಡಾ.ಚಿರಂಜೀವಿ ಹೇಳಿದರು.

ಪಟ್ಟಣದ ಆರೋಗ್ಯ ಇಲಾಖೆಯ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಮಿಷನ್ ಇಂದ್ರ ಧನುಷ್ ಲಸಿಕಾ ಅಭಿಯಾನದಲ್ಲಿ ಮಾತನಾಡಿದರು. ಐದು ವರ್ಷದೊಳಗಿನ ಎಲ್ಲ ಮಕ್ಕಳು ಹಾಗೂ ಗರ್ಭಿಣಿಯರು ಲಸಿಕೆಯಿಂದ ವಂಚಿತರಾಗಬಾರದು. ಈ ಲಸಿಕೆ ಪಡೆದ ಮಗು, ತಾಯಿ ಕಾಯಿಲೆಯಿಂದ ಮರಣ ಹೊಂದುವುದು ತಪ್ಪುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆ ಅಧ್ಯಕ್ಷ ವಾರದ ಗೌಸ್‌ಮೊಹಿದ್ದೀನ್ ಮಾತನಾಡಿ, ಲಸಿಕೆಯ ಬಗ್ಗೆ ಇತರರಿಗೂ ಮಾಹಿತಿ ನೀಡಿ ಎಂದು ಹೇಳಿದರು. ಜೆ.ಸಿ.ಐ. ಅಧ್ಯಕ್ಷ ಸಂತೋಷ ಮಾತನಾಡಿದರು. ಸಿಬ್ಬಂದಿಯಾದ ರಾಧಾ, ವಿಶಾಲಾಕ್ಷಿ, ಮಂಜುನಾಥ, ಮೇಘರಾಜ್, ಆಶಾ ಕಾರ್ಯಕರ್ತೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net