ಹೂವಿನಹಡಗಲಿ ತಾಲೂಕಿನ ಡೊಂಬರಹಳ್ಳಿಯಲ್ಲಿ 5 ಎಕರೆ ದಾಳಿಂಬೆ ಬೆಳೆಗೆ ಬೆಂಕಿ, ಅಪಾರ ನಷ್ಟ

16032021 Hoovina Hadagali pomegranate crop loss
Published on

ಹೂವಿನಹಡಗಲಿ: ತಾಲೂಕಿನ ಹೊಳಲು ಕಂದಾಯ ವ್ಯಾಪ್ತಿಯ ಡೊಂಬರಹಳ್ಳಿ ತಾಂಡಾದ ಹತ್ತಿರ ಆಕಸ್ಮಿಕ ಬೆಂಕಿ ತಗುಲಿ 5 ಎಕರೆ ದಾಳಿಂಬೆ ಬೆಳೆ ಸಂಪೂರ್ಣ ಸುಟ್ಟು, ಅಪಾರ ನಷ್ಟವಾಗಿದೆ.

ರೈತ ಎಚ್.ಎಂ ಹಾಲಯ್ಯನವರ ಜಮೀನಿನಲ್ಲಿ ದಾಳಿಂಬೆ ಬೆಳೆಯಲಾಗಿತ್ತು, ಬೆಳೆ ಉತ್ತಮವಾಗಿ ಬೆಳೆದು ಹೂವು ಬಿಡುವ ಹಂತದಲ್ಲಿತ್ತು. ಕಳೆದ ಶುಕ್ರವಾರ ಆಕಸ್ಮಿಕ ಬೆಂಕಿ ಬಿದ್ದು 5ಎಕರೆ ದಾಳಿಂಬೆ ಬೆಳೆ ನಾಶವಾಗಿದೆ.

ಪಕ್ಕದ ಎಂ.ಎಂ.ಚನ್ನವೀರಯ್ಯರ ಎರಡು ಸಾಲು ದ್ರಾಕ್ಷಿ ಬೆಳೆ ಹಾಗೂ ಟಿ.ಚನ್ನವೀರಗೌಡಗೆ ಸೇರಿದ್ದ ಮಾವಿನಗಿಡಗಳು ಕೂಡ ಬೆಂಕಿಗೆ ಆಹುತಿಯಾಗಿವೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಪರಿಹಾರ ವಿತರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net