ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಎಐಕೆಎಸ್‌ನಿಂದ ಪ್ರತಿಭಟನೆ

14022022 Hadagali protest
Published on


ಹೂವಿನಹಡಗಲಿ: ತಾಲೂಕಿನ ರೈತರ ಭೂಮಿ ಸರ್ವೇ ಮಾಡುವ ಕಾರ್ಯ ತ್ವರಿತವಾಗಿ ನಡೆಸುವುದು ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ ಒತ್ತಾಯಿಸಿದೆ.

ತಹಸೀಲ್ದಾರ್ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ನಟರಾಜ್‌ಗೆ ಮನವಿ ಸಲ್ಲಿಸಿತು. ಜಿಲ್ಲಾಸಂಚಾಕ ಸುರೇಶ ಹಲಗಿ ಸುರೇಶ ಮಾತನಾಡಿ, ಹಣ ವಸೂಲಿ ನಿಲ್ಲಬೇಕು. ರೈತರಿಗೆ ಸರ್ವೇ ಇಲಾಖೆಯಿಂದ ಯಾವ ಕಾರ್ಯವೂ ಆಗುತ್ತಿಲ್ಲ ಎಂದು ಹೇಳಿದರು.

ತಾಲೂಕಿನ ಎಲ್ಲ ಗ್ರಾಮಗಳನ್ನು ಪೋಡಿ ಮುಕ್ತ ಗ್ರಾಮಗಳನ್ನಾಗಿ ಮಾಡಬೇಕು. ರೈತರ ಪಹಣಿಗಳಲ್ಲಿ ತಪ್ಪಾಗಿರುವ ಹೆಸರುಗಳನ್ನು ಸರಿಪಡಿಸಲು ವಕೀಲರ ಬದಲಾಗಿ ಜಿಲ್ಲಾಧಿಕಾರಿಗಳು, ತಹಸೀಲ್ದಾರ್‌ರವರೇ ಬಗೆಹರಿಸಬೇಕೆಂದು ಒತ್ತಾಯ ಮಾಡಿದರು. ಹಲವಾರು ಬಾರಿ ಹೋರಾಟ ಮಾಡುತ್ತಾ ಬಂದಿರುವ ರೈತರ ಎಲ್ಲ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕೆಂದು ಹೇಳಿದರು. ಸಂಘಟನೆಯ ಮುಖಂಡ ಶಾಂತರಾಜ್ ಜೈನ್, ಬಸವರಾಜ್ ಸಂಶಿ, ಅಂಕ್ಲಿ ವಿರೂಪಾಕ್ಷ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net