ಹೂವಣ್ಣ ಅಧ್ಯಕ್ಷ, ಸುಭಾಷ ಉಪಾಧ್ಯಕ್ಷ

12..15
ಇಂಗಳಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಂಘದ ನೂತನ ಅಧ್ಯಕ್ಷ ಹೂವಣ್ಣ ಚೌಗುಲೆ, ಉಪಾಧ್ಯಕ್ಷ ಸುಭಾಷ ಘೋಸರವಾಡೆ ಅವರನ್ನು ಸನ್ಮಾನಿಸಲಾಯಿತು. ರಾಜಾರಾಮ ಮಾನೆ, ಅಪ್ಪಾಸಾಹೇಬ ಸೌಂದಲಗೆ, ಬಾಜಿರಾವ ಮಾನೆ, ಡಾ.ಅಜಿತ ಚಿಗರೆ, ಸತೀಶ ಮುಸ್ಸಂಡಿ ಇತರರು ಇದ್ದರು.
Published on

ಮಾಂಜರಿ: ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ವಿವಿದೋದ್ಧೇಶಗಳ ಪ್ರಾಥಮಿಕ ಗ್ರಾಮೀಣ ಕಷಿ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಹೂವಣ್ಣ ಚೌಗುಲೆ ಮತ್ತು ಉಪಾಧ್ಯಕ್ಷರಾಗಿ ಸುಭಾಷ ಘೋಸರವಾಡೆ ಸೋಮವಾರ ಅವಿರೋಧ ಆಯ್ಕೆಯಾಗಿದ್ದಾರೆ.

ನಿಕಟಪೂರ್ವ ಅಧ್ಯಕ್ಷ ರಾಜಾರಾಮ ಮಾನೆ, ಮುಖಂಡರಾದ ಅಪ್ಪಾಸಾಹೇಬ ಸೌಂದಲಗೆ, ಬಾಜಿರಾವ ಮಾನೆ, ಡಾ.ಅಜಿತ ಚಿಗರೆ ಮಾತನಾಡಿದರು. ಚುನಾವಣಾಧಿಕಾರಿಯಾಗಿ ಸತೀಶ ಮುಸ್ಸಂಡಿ ಕಾರ್ಯನಿರ್ವಹಿಸಿದರು.

ಸಂಘದ ಸದಸ್ಯರಾದ ಬಸಪ್ಪ ಕಾಂಬಳೆ, ಡಾ.ಅಜಿತಕುಮಾರ ಚಿಗರೆ, ಮಾರುತಿ ಪವಾರ, ಸದಾಶಿವ ಜಾಧವ, ಸುನೀಲ ಪಾಟೋಳೆ, ಜಿನ್ನಪ್ಪ ಗೆದ್ದುಗೋಳ, ಸವಿತಾ ಘೋಸರವಾಡೆ, ಬೀಬಿತಾಯಿ ಶಿಂಧೆ ಸೇರಿ ಸುಭಾಷ ಜುಗೂಳೆ, ಗಣಪತಿ ಧನವಾಡೆ, ಅಪ್ಪಾಸಾಹೇಬ ಮಿರ್ಜೆ, ಬಾಬಾಸಾಬ ಧಾಬಡೆ, ಸದಾಶಿವ ಕುಡಚೆ, ಸಂಜಯ ಕುಡಚೆ, ಅಣ್ಣಾಸಾಬ ಸರಡೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net