ಹೂಲಿಕಟ್ಟಿ ಶ್ರೀ ಕುಮಾರ ದೇವರಿಗೆ ಪಟ್ಟಾಧಿಕಾರ

1
ಹೂಲಿಕಟ್ಟಿ ಶಿವಲಿಂಗೇಶ್ವರ ಮಠದ ಶ್ರೀ ಕುಮಾರ ದೇವರಿಗೆ ಭಾನುವಾರ ಹಾಲವಿ ಚರಣಗಿರಿ ಶಿವಯೋಗೀಶ್ವರ ಸಂಸ್ಥಾನ ಮಠದ ಅಭಿನವ ಮಹಾಂತ ಸ್ವಾಮಿಗಳಿಂದ ಪಟ್ಟಾಧಿಕಾರ ಹಾಗೂ ಕುಮಾರ ಮಹಾಸ್ವಾಮಿಗಳು ಎಂಬ ನೂತನ ಅಭಿದಾನ ನೀಡಲಾಯಿತು. ಮುರುಘರಾಜೇಂದ್ರ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ ಇತರರಿದ್ದರು.
Published on

ೊಳವಿ: ಸಮೀಪದ ಹೂಲಿಕಟ್ಟಿ ಶಿವಲಿಂಗೇಶ್ವರ ಮಠದ ಶ್ರೀ ಕುಮಾರ ದೇವರಿಗೆ ಭಾನುವಾರ ಹಾಲವಿ ಚರಣಗಿರಿ ಶಿವಯೋಗೀಶ್ವರ ಸಂಸ್ಥಾನ ಮಠದ ಅಭಿನವ ಮಹಾಂತ ಸ್ವಾಮಿಗಳಿಂದ ವಿಧಿ-ವಿಧಾನಗಳ ಪ್ರಕಾರ ಪಟ್ಟಾಧಿಕಾರ ಹಾಗೂ ಕುಮಾರ ಮಹಾಸ್ವಾಮಿಗಳು ಎಂಬ ನೂತನ ಅಭಿದಾನ ನೀಡಲಾಯಿತು.

ಗೋಕಾಕ ಶೂನ್ಯ ಸಂಪಾದನ ಮಠ ಮುರುಘರಾಜೇಂದ್ರ ಸ್ವಾಮೀಜಿ, ನದಿ ಇಂಗಳಗಾಂವ ಸಿದ್ದಲಿಂಗ ಸ್ವಾಮೀಜಿ, ಬಟಕುರ್ಕಿ ಬಸಲಿಂಗ ಸ್ವಾಮೀಜಿ, ಜಡಿಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ ಹಾಗೂ ಇಪ್ಪತ್ತಕ್ಕೂ ಹೆಚ್ಚು ಮಹಾಮಠದ ಸ್ವಾಮೀಜಿಗಳು ಪಾಲ್ಗೊಂಡಿದ್ದರು. ಗ್ರಾಮದ ಸುತ್ತಮುತ್ತಲಿನ ಭಕ್ತರು ಮತ್ತು ಮುತ್ತೈದೆಯರು ಆರತಿ ಸಮೇತ ಪಾಲ್ಗೊಂಡರು.

ಸಂಜೆ 5ಗಂಟೆಗೆ ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದಿಂದ ಕುಂಭಮೇಳ ಹಾಗೂ ಮುತ್ತೈದೆಯರಿಂದ ಆರತಿ ಬೆಳಗುವ ಮೂಲಕ ರಥೋತ್ಸವದಲ್ಲಿ ಮೆರವಣಿಗೆ ಮೂಲಕ ಶಿವಲಿಂಗೇಶ್ವರ ಮಠದ ತನಕ ಬರಮಾಡಿಕೊಳ್ಳಲಾಯಿತು. ಗ್ರಾಮದ ಬೀದಿಬೀದಿಗಳಲ್ಲಿ ರಂಗೋಲಿ ಮತ್ತು ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಕುಮಾರ ದೇವರು ನಾಡಿನ ಎಲ್ಲ ಹರಗುರು ಚರಮೂರ್ತಿಗಳು, ಶರಣ-ಶರಣೆಯರ ಮತ್ತು ಗುರುಹಿರಿಯರ ಸಮ್ಮುಖದಲ್ಲಿ ಶೂನ್ಯ ಪೀಠ ಅಲಂಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net