ಹುಕ್ಕೇರಿಯಲ್ಲಿ ದಾಖಲೆ ಮಳೆ

0301
Published on

ಹುಕ್ಕೇರಿ: ಪಟ್ಟಣ ಮತ್ತು ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿದ ಪರಿಣಾಮ ಮಳೆ ನೀರಿನ ರಭಸಕ್ಕೆ ವಾಹನಗಳು, ಯುವಕ ತೇಲಿಹೋದ ಘಟನೆ ಭಾನುವಾರ ಸಂಭವಿಸಿದೆ.

ಪಟ್ಟಣದ ಲೆಂಡೂರಿ ನಾಲಾ ತುಂಬಿ ಹಳೇ ಬಸ್ ನಿಲ್ದಾಣ, ಮಾಸಾಪ್ತಿ ಕಾರಂಜಿ, ಕೋಟೆ ಭಾಗದ ಸರ್ಕಾರಿ ಪ್ರಾಥಮಿಕ ಶಾಲೆ, ಹಳ್ಳದಕೇರಿಯ
ಕೆಲ ಪ್ರದೇಶಗಳು ಹಾಗೂ ಘಟಪ್ರಭಾ-ಸಂಕೇಶ್ವರ ರಸ್ತೆಯ ಜಾಬಾಪುರದಿಂದ ಬೆಲ್ಲದ ಬಾಗೇವಾಡಿ ಕ್ರಾಸ್‌ವರೆಗೆ ಅನೇಕ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ಹಳೇ ಬಸ್ ನಿಲ್ದಾಣದ ಕೆಲ ಮನೆಗಳಿಗೆ ನೀರು ನುಗ್ಗಿದೆ.

ಹಳೇ ಬಸ್ ನಿಲ್ದಾಣ ಬಳಿ ಲೇಂಡೂರಿ ನಾಲಾ ತುಂಬಿ ರಸ್ತೆಗೆ ನುಗ್ಗಿದ್ದರಿಂದ ವಾಹನಗಳು ಮತ್ತು ಯುವಕ ಕೊಚ್ಚಿಕೊಂಡು ಹೋಗಿದ್ದಾನೆ. ಜಲಾವೃತ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಜೆಯಿಂದ ವಿದ್ಯುತ್ ಕಡಿತಗೊಂಡಿದ್ದು ಪಟ್ಟಣದ ವಾಸಿಗಳು ಮತ್ತಷ್ಟು ಪರದಾಡುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net