

ಧಾರವಾಡ: ಮಧ್ಯಪ್ರದೇಶದ ಸಂಯುಕ್ತ ಭಾರತೀಯ ಖೇಲ್ -Ëಂಡೇಶನ್ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ದುಬೈನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ೭೫ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದ ತಾಲೂಕಿನ ಮರೇವಾಡ ಗ್ರಾಮದ ಶಿವಪ್ಪ ಸಲಕಿ ಅವರನ್ನು ಶಿವಲೀಲಾ ವಿನಯ ಕುಲಕರ್ಣಿ ಮಂಗಳವಾರ ಸನ್ಮಾನಿಸಿದರು.
ಹಿರಿಯರ ೮೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡ ೭೬ ವರ್ಷದ ಶಿವಪ್ಪ ಅವರ ಮನೆಗೆ ತೆರಳಿದ್ದ ಶಿವಲೀಲಾ ಕುಲಕರ್ಣಿ ಅವರು, ಶಾಲು ಹೊದಿಸಿ ಸನ್ಮಾನಿಸಿದರು.
೧೬ನೇ ವಯಸ್ಸಿನಿಂದ ಓಟದ ಗೀಳು ಹಚ್ಚಿಕೊಂಡ ಶಿವಪ್ಪ, ಪ್ರತಿದಿನ ಓಟ, ಯೋಗವನ್ನು ಮುಂದುವರಿಸಿದ್ದಾರೆ. ಬೆಳಗ್ಗೆ ೪ ಗಂಟೆಗೆ ಎದ್ದು ೧೦ ಕಿ.ಮೀ. ಓಟವನ್ನು ಪೂರ್ಣಗೊಳಿಸುತ್ತಾರೆ ಎಂದು ಮಾಹಿತಿ ಪಡೆದ ಶಿವಲೀಲಾ ಅವರು, ಅಗತ್ಯ ನೆರವು ನೀಡುವ ಭರವಸೆ ನೀಡಿದರು.