ಜೆಎಸ್‌ಎಸ್‌ನ ಕ್ರೀಡಾ ಸಾಧಕರಿಗೆ ಸನ್ಮಾನ

19 Dwd 4
Published on

ಧಾರವಾಡ: ಕ್ರೀಡಾಕೂಟಗಳು ಜೀವನೋತ್ಸಾಹ ತುಂಬುತ್ತವೆ. ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕಾಗಿ ಆಟೋಟಗಳಲ್ಲಿ ಭಾಗವಹಿಸಬೇಕು. ಕೇವಲ ಪಠ್ಯದ ಶಿಕ್ಷಣದಿಂದ ಮೆದುಳನ್ನು ವ್ಯಸ್ಥವಾಗಿಟ್ಟುಕೊಳ್ಳಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಶ್ರೇಯೋಬಿವೃದ್ಧಿಗೆ ಕ್ರೀಡೆ ಅವಶ್ಯ ಎಂದು ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಹೇಳಿದರು.
ನಗರದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಕ.ವಿ.ವಿ ಅಂತರ ಕಾಲೇಜುಗಳ ಕ್ರೀಡಾಕೂಟದಲ್ಲಿ ದಾಖಲೆ ಬರೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಚಿಕ್ಕಂದಿನಿ0ದಲೇ ಕ್ರಮಬದ್ಧವಾಗಿ ಕ್ರೀಡೆಗಳಲ್ಲಿ ಭಾಗವಹಿಸಬೇಕು. ವಿದ್ಯಾರ್ಥಿಗಳ ವಿದ್ಯಾಭ್ಯಾಸ ಕ್ರೀಡೆಯ ಜೊತೆಯಲ್ಲಿಯೇ ಪ್ರಾರಂಭವಾಗಬೇಕು. ಕ್ರೀಡಾಕೂಟಗಳಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾª ಮನೋಭಾವ, ಐಕ್ಯತಾ ಮನೋಭಾವನೆ ಬೆಳೆಸಬಹುದು ಎಂದರು.
ಮಹಾವೀರ ಉಪಾಧ್ಯೆ, ಡಾ. ಆರ್.ವಿ. ಚಿಟಗುಪ್ಪಿ, ಶ್ರೀಕಾಂತ ರಾಗಿಕಲ್ಲಾಪೂರ, ಶ್ರವಣ ಯೋಗಿ, ಬಾಹುಬಲಿ ಚೌಗಲಾ, ಗಣೇಶ ನಾಯಕ, ಇತರರಿದ್ದರು.
ಡಾ. ಸೂರಜ್ ಜೈನ್ ಸ್ವಾಗತಿಸಿದರು. ಜಿನೇಂದ್ರ ಕುಂದಗೊಳ ನಿರೂಪಿಸಿದರು. ವಿವೇಕ ವಂದಿಸಿದರು.

ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯಿ0ದ ಸನ್ಮಾನಿಸಿ ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net