ನಾರಾಯಣ ಗುರುಗಳ ಆದರ್ಶ ಪಾಲಿಸಿ

01sunti01
Published on

ಸುಂಟಿಕೊಪ್ಪ : ಎಲ್ಲಾ ಸಮುದಾಯದವರನ್ನೂ ಸಮನವಾಗಿ ಕಂಡು ಭಕ್ತಿ ಮಾರ್ಗದೆಡೆಗೆ ಕರೆದೊಯ್ದ ಶ್ರೀ ನಾರಾಯಣ ಗುರುಗಳ ಆದರ್ಶ ಪಾಲಿಸೋಣ ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದರು.
ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಪದಾಧಿಕಾರಿಗಳ ಸೌಹಾರ್ದ ಸಭೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ಸಂಘದ ಪ್ರಮುಖ ಬೇಡಿಕೆಯಾಗಿರುವ ನಿವೇಶನ ಮತ್ತು ಅದಕ್ಕೆ ಅಗತ್ಯವಿರುವ ಅರ್ಥಿಕ ಸಂಪನ್ಮೂಲ ಸಂಗ್ರಹಕ್ಕೆ ಬೆಂಬಲ ನೀಡುವುದಾಗಿ ಹೇಳಿದರು.
ಮಹಾನ್‌ದರ್ಶನಿಕರಲ್ಲಿ ಒಬ್ಬರಾಗಿದ್ದ ನಾರಾಯಣ ಗುರುಗಳ ಜೀವನ ಮತ್ತು ಚಿಂತನೆಯನ್ನು ನಾವೆಲ್ಲರೂ ಅನುಸರಿಸಬೇಕು ಎಂದರು.
ಇದೇ ಸಂದರ್ಭ ಶಾಸಕ ಮಂತರ್ ಗೌಡ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಸುಂಟಿಕೊಪ್ಪ ಹೋಬಳಿ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎಂ.ಮಣಿ ಮುಖೇಶ್, ಹಿರಿಯ ಸಲಹೆಗಾರರಾದ ಕೆ.ಪಿ.ಜಗನ್ನಾಥ, ಕಾರ್ಯದರ್ಶಿ ವೆಂಕಪ್ಪ ಕೊಟ್ಯಾನ್ ಮಾತನಾಡಿದರು.
ಪದಾಧಿಕಾರಿಗಳಾದ ನಾಗೇಶ್ ಪೂಜಾರಿ, ಜಿನಪ್ಪ, ಬಾಬು ಪೂಜಾರಿ, ರಮೇಶ, ಕೃಷ್ಣಪ್ಪ, ರಮೇಶ, ಗೀತಾ ವಿಶ್ವನಾಥ್, ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘದ ಮಹಿಮಾ ಸತ್ಯ,ಮೀನಾ, ಪೂರ್ಣಿಮಾ ರವಿ, ಯುವ ಘಟಕದ ಅಧ್ಯಕ್ಷ ಪ್ರೀತಂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net