

ಮೂಡುಬಿದಿರೆ: ಕಲ್ಲಮುಂಡ್ಕೂರು ಸರ್ವೋದಯ ಫ್ರೆಂಡ್ಸ್ ಆಶ್ರಯದಲ್ಲಿ ನಡೆದ ಐದನೇ ಆವೃತ್ತಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ಓಂಕಾರ್ ಬಾಲಾಜಿ ತಂಡ ಪ್ರಥಮ, ಎನ್.ವೈ.ಬಿ.ಪ್ಯಾಂಥರ್ಸ್ ದ್ವಿತೀಯ, ನಮೋ ವಾರಿಯರ್ಸ್ ತೃತೀಯ ಹಾಗೂ ಕೆ.ಎಫ್.ಸಿ. ಕಟೀಲು ತಂಡ ಚತುರ್ಥ ಬಹವಾನಗಳನ್ನು ಪಡೆದವು.
ಸಮಾರೋಪ ಸಮಾರಂಭದಲ್ಲಿ ಮೂಡುಬಿದಿರೆ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಸಹಿತ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಪಂದ್ಯಾಕೂಟದಲ್ಲಿ ಉಳಿಕೆದ 5 ಸಾವಿರ ರೂ. ಮೊತ್ತವನ್ನು ಕಲ್ಲಮುಂಡ್ಕೂರು ಸರ್ವೋದಯ ಪ್ರೌಢಶಾಲಾ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೀಡಲಾಯಿತು.
ಸರ್ವೋದಯ ಫ್ರೆಂಡ್ಸ್ ತಂಡದ ಆಟಗಾರರಾದ ಪ್ರಸನ್ನ ಆಚಾರ್ಯ, ನೀತು ಪಟ್ಟೆ, ಸಂದೀಪ್ ಹಾಗೂ ಹಿರಿಯ ವಾಲಿಬಾಲ್ ಆಟಗಾರ ಸನತ್ ಕುವಾರ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಕಲ್ಲಮುಂಡ್ಕೂರು ಶ್ರೀ ಕ್ಷೇತ್ರ ದೈಲಬೆಟ್ಟುವಿನ ಆಡಳಿತ ಮೊಕ್ತೇಸರ ಜಯಪ್ರಕಾಶ್ ಪಡಿವಾಳ್, ಸರ್ವೋದಯ ಫ್ರೆಂಡ್ಸ್ ಗೌರವಾಧ್ಯಕ್ಷ ಸ್ಟ್ಯಾನಿ ಡಿಸೋಜ, ಸದಾನಂದ ಪೂಜಾರಿ, ಗ್ರಾಪಂ ವಾಜಿ ಉಪಾಧ್ಯಕ್ಷ ಸುಂದರ ಪೂಜಾರಿ, ನಂದೇಶ್ ಕೋಟ್ಯಾನ್, ಪ್ರಕಾಶ್ ಮಿರಾಂದ, ಸಂದೀಪ್ ಸುವರ್ಣ, ಸುಧಾಕರ ಪೂಜಾರಿ, ಗ್ರಾಪಂ ಸದಸ್ಯ ಗಿರೀಶ್ ಪೂಜಾರಿ, ಎನ್.ವೈ.ಬಿ. ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸದಾನಂದ ಪೂಜಾರಿ ಮತ್ತಿತರರಿದ್ದರು.