ಗೌರವ ಪುರಸ್ಕಾರ ಕಾರ್ಯ ನಿರಂತರ: ಎ.ಸಿ.ಭಂಡಾರಿ ಆಶಯ

Kin_Kateel-Asrana
Published on

ವಿಜಯವಾಣಿ ಸುದ್ದಿಜಾಲ ಕಟೀಲು

ದಿ.ಕೀರ್ತಿ ಶೇಷ ಗೋಪಾಲಕೃಷ್ಣ ಆಸ್ರಣ್ಣ ಅವರು ದೇವರ ನಂತರ ಸ್ಥಾನ ಪಡೆದವರು. ಮುಗ್ಧತೆ ಭಾವ ಜೀವಿಯ ಸಂಸ್ಮರಣೆ, ಅವರ ನೆನಪಿನಲ್ಲಿ ಗೌರವ ಪುರಸ್ಕಾರ ನೀಡುವ ಕೆಲಸ ನಿರಂತರ ನಡೆಯಲಿ ಎಂದು ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಎ.ಸಿ.ಭಂಡಾರಿ ಹೇಳಿದರು.

ಕಟೀಲಿನಲ್ಲಿ ಶನಿವಾರ ಕೀರ್ತಿಶೇಷ ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಸನ್ಮಾನ ಪುರಸ್ಕಾರ, ವಿಶೇಷ ಗೌರವಾರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕುಳಾಯಿ ಯಕ್ಷ ನಂದನದ ಸಂಚಾಲಕ ಸಂತೋಷ್ ಐತಾಳ್, ಪ್ರಮುಖರಾದ ಲೀಲಾಕ್ಷ ಕರ್ಕೇಪ, ಕ.ಸಾ.ಪ.ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಶಾರದಾ ಸಮೂಹ ಸಂಸ್ಥೆ ಮುಖ್ಯಸ್ಥ ಪ್ರೊ.ಎಂ.ಬಿ.ಪುರಾಣಿಕ್, ಮೋಹನ್ ಮೆಂಡನ್ ತೊಕ್ಕೂಟ್ಟು, ಸುಧಾಕರ್ ರಾವ್ ಪೇಜಾವರ, ಯುಗಪುರುಷದ ಭುವನಾಭಿರಾಮ ಉಡುಪ, ದಿನೇಶ್ ಬಂಡ್ರಿಯಾಲ್ ತಾಳಿಪಾಡಿಗುತ್ತು, ಸುಬ್ರಹ್ಮಣ್ಯ ಪ್ರಸಾದ್ ಶಿಬರೂರು, ದಿನೇಶ್ ಬಂಡ್ರಿಯಾಲ್ ತಾಳಿಪಾಡಿಗುತ್ತು, ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ, ಕದ್ರಿ ನವನೀತ ಶೆಟ್ಟಿ, ಕೆ.ಪಿ.ಜಗದೀಶ್ ಅಧಿಕಾರಿ, ಜಯಂತಿ ಆಸ್ರಣ್ಣ, ಗೋಪಾಲಕೃಷ್ಣ ಆಸ್ರಣ್ಣ ಕಟೀಲು, ದೊಡ್ಡಯ್ಯ ಮೂಲ್ಯ ಕಟೀಲು, ಅಶ್ವಥ್ ರಾವ್ ಉಪಸ್ಥಿತರಿದ್ದರು.
ಗುರುಪ್ರಸಾದ್ ಭಟ್ ವಂದಿಸಿದರು. ಡಾ.ರಮ್ಯಾ ರವಿತೇಜ ನಿರೂಪಿಸಿದರು. ಬಳಿಕ ಯಕ್ಷಗಾನ ಬಯಲಾಟ ನಡೆಯಿತು.

ಸಾಧಕರಿಗೆ ಪ್ರಶಸ್ತಿ ಪ್ರದಾನ

ಮೂಡುಬಿದಿರೆ ಉದ್ಯಮಿ ಶ್ರೀಪತಿ ಭಟ್ ಅವರಿಗೆ ವಿಶೇಷ ಪುರಸ್ಕಾರ, ದಿ.ಗೋಪಾಲಕೃಷ್ಣ ಆಸ್ರಣ್ಣ ಅರ್ಚಕ ಪ್ರಶಸ್ತಿಯನ್ನು ಲಕ್ಷ್ಮೀನಾರಾಯಣ ಆಚಾರ್ಯ ಮೂಡುಮಠ, ಮೊಕ್ತೇಸರ ಪ್ರಶಸ್ತಿಯನ್ನು ಮುಚ್ಚೂರು ಹರಿ ಭಟ್, ಯಕ್ಷಗಾನ ಕಲಾವಿದ ಪ್ರಶಸ್ತಿಯನ್ನು ಉಮೇಶ್ ಕುಪ್ಪೆಪದವು ಅವರಿಗೆ ನೀಡಿ ಸನ್ಮಾನಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ವಿದ್ವಾನ್ ರಾಧಾಕೃಷ್ಣ ಭಟ್ ಬೆಂಗ್ರೋಡಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧಕರಾದ ನಟಿ ಆರಾಧನಾ ಭಟ್, ರಾಮ ಬಾಯರಿ, ಸುಬ್ರಹ್ಮಣ್ಯ ಭಟ್(ಪಾಕ ಶಾಸ್ತ್ರ), ಕ್ರೀಡಾ ಕ್ಷೇತ್ರದಲ್ಲಿ ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಬಡಗಎಕ್ಕಾರು, ಕೃಷಿ ಕ್ಷೇತ್ರದಲ್ಲಿ ಎಕ್ಕಾರು ಸಿರಿ ಕುರಲ್ ರೈತ ಉತ್ಪಾದಕರ ಸಂಸ್ಥೆ, ಕಿನ್ನಿಗೋಳಿಯ ಪಾಂಚಜನ್ಯ ಗೋಶಾಲೆ ನಾಲದೆ, ಅಂತಾರಾಷ್ಟ್ರೀಯ ಯೋಗ ಪಟು ಮೇಘಶ್ರೀ ಶೆಟ್ಟಿ, ದ.ಕ. ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ವಿದ್ಯಾಲತಾ ಅವರನ್ನು ಗೌರವಿಸಲಾಯಿತು. ಕಟೀಲು ಶಾಲೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net