

ಕೋಟ: ಐರೋಡಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಧನೆಗೈದ ಎಂಟು ಅಂಗವಿಕಲರನ್ನು ಗುರುತಿಸಿ ಇತ್ತೀಚೆಗೆ ಸನ್ಮಾನಿಸಲಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ಶುಭಹಾರೈಸಿದರು. ಗ್ರಾಮ ಆಡಳಿತ ಅಧಿಕಾರಿ ಚೆಲುವರಾಜು, ಪಂಚಾಯಿತಿ ಅಧ್ಯಕ್ಷ ಸಕ್ಕು, ಉಪಾಧ್ಯಕ್ಷೆ ಗೀತಾ ಶೆಟ್ಟಿ, ಸದಸ್ಯರು, ಸಿಬ್ಬಂದಿ, ಗ್ರಾಮ ಸಹಾಯಕ, ಗ್ರಂಥಪಾಲಕಿ, ಅಂಗವಿಕಲರ ಪಾಲಕ ಎ.ಎಸ್ ಗಣೇಶ್ ಇದ್ದರು. ಕಾರ್ತಿಕ್ ಹಂಗಾರಕಟ್ಟೆ ಕಾರ್ಯಕ್ರಮ ನಿರೂಪಿಸಿದರು.