ಮಾ.೨೩ ರಂದು ಪಾಲಿಕೆ ಅಧ್ಯಕ್ಷರಿಗೆ ಸನ್ಮಾನ

KP ANIL KUMARA
KP ANIL KUMARA
Published on

ರಾಯಚೂರು ನವರತ್ನ ಯುವಕ ಸಂಘದಿAದ ಮಾ.೨೩ರಂದು ನಗರದ ಹರಿಜನವಾಡ ಸಮುದಾಯ ಭವನದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಿಗೆ ಸನ್ಮಾನ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಕೆ.ಪಿ.ಅನಿಲಕುಮಾರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸೊಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಘದಿAದ ಕಳೆದ ೨೪ ವರ್ಷಗಳಿಂದ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು, ೨೦೨೩-೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿಯಿಂದ ಪದವಿವರೆಗಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುತ್ತಿದ್ದು, ಜತೆಗೆ ಮಾದಿಗ ಸಮಾಜದ ನರಸಮ್ಮ ಸರಸಿಂಹಲು ಮಾಡಗಿರಿ ಅವರು ಮಹಾನಗರ ಪಾಲಿಕೆಯ ಅಧ್ಯಕ್ಷರಾದ ಹಿನ್ನೆಲೆಯಲ್ಲಿ ಅವರಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮಾ.೧೮ರೊಳಗಾಗಿ ತಮ್ಮ ಮಾಹಿತಿಯ ಜತೆಗೆ ಬಯೊಡೇಟಾ, ಜಾತಿ ಪ್ರಮಾಣಪತ್ರ, ಅಂಕಪಟ್ಟಿ, ಭಾವಚಿತ್ರಗಳನ್ನು ಹರಿಜನವಾಡದ ನೂತನ ಗ್ರಂಥಾಲಯದಲ್ಲಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ೭೯೭೫೩೨೨೧೩೫, ೯೯೭೨೨೮೩೧೬೮, ೯೯೦೨೪೦೨೫೨೫ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶರಣಪ್ಪ, ಪ್ರಮುಖರಾದ ಚಂದ್ರು ಭಂಡಾರಿ, ಆರ್.ಆಂಜನೇಯ್ಯ, ಜನಾರ್ಧನ ಹಳ್ಳಿಬೆಂಚಿ, ವೆಂಕಟೇಶ, ಹುಲಿಗೆಪ್ಪ, ಪವನ್ ಕುಮಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net