ಸಾಸ್ತಾನದಲ್ಲಿ ಸಾಧಕಿಯರಿಗೆ ಸನ್ಮಾನ

rotari
Published on

ಕೋಟ: ಹಂಗಾರಕಟ್ಟೆ ಸಾಸ್ತಾನದ ರೋಟರಿ ಕ್ಲಬ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನ ಶನಿವಾರ ಆಚರಿಸಲಾಯಿತು. ಡಾ.ರಶ್ಮಿ ಮುರುಳಿಧರ ಹಾಗೂ ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಂ ಮಹಿಳಾ ದಿನಾಚರಣೆಯ ಮಹತ್ವದ ಬಗ್ಗೆ ಹಾಗೂ ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಶಬನಾ ಅಂಜುಂ ಹಾಗೂ ಭಿಕ್ಷಾಟನೆಯಿಂದ ಸಂಪಾದಿಸಿದ ಹಣವನ್ನು ದೇವಳಗಳ ಅನ್ನದಾನಕ್ಕೆ ದಾನಗೈಯ್ಯುವ ಅಶ್ವತಮ್ಮಾ ಅವರನ್ನು ಸನ್ಮಾನಿಸಲಾಯಿತು. ಕ್ಲಬ್ ಅಧ್ಯಕ್ಷ ಲೀಲಾವತಿ ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು. ಸುಲತಾ ಹೆಗ್ಡೆ ವಂದಿಸಿದರು. ಗಣೇಶ್ ಜಿ.ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net