ಯುವಜನರು ತಪ್ಪನ್ನು ಸರಿಪಡಿಸುವ ಕೆಲಸ ಮಾಡಲಿ: ರಾಜ್ಯ ಇಂಜಿನಿಯರ್ ಸಂಘದ ಗೌರವಾಧ್ಯಕ್ಷ ಡಿ.ಎಸ್.ದೇವರಾಜು ಕಿವಿಮಾತು

1 (3)
Published on

ಮಂಡ್ಯ: ಸಮಾಜದ ಕೆಟ್ಟು ಹೋಗಿರುವ ವ್ಯವಸ್ಥೆಯನ್ನು ಯುವ ಜನರು ಸರಿಪಡಿಸುವ ಕೆಲಸ ಮಾಡಬೇಕು ಎಂದು ರಾಜ್ಯ ಇಂಜಿನಿಯರ್ ಸಂಘದ ಗೌರವಾಧ್ಯಕ್ಷ ಡಿ.ಎಸ್.ದೇವರಾಜು ಹೇಳಿದರು.

ನಗರದ ಅಗ್ರಿಕ್ಲಬ್ ಸಭಾಂಗಣದಲ್ಲಿ ಜಿಲ್ಲಾ ಗುತ್ತಿಗೆದಾರರ ಸಂಘದ ವತಿಯಿಂದ ಆಯೋಜಿಸಿದ್ದ ನಿವೃತ್ತ ಇಂಜಿನಿಯರ್‌ಗೆ ಬೀಳ್ಕೊಡುಗೆ ಹಾಗೂ ನೂತನ ಕಾರ್ಯಪಾಲಕ ಇಂಜಿನಿಯರ್‌ಗೆ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಲ ಕಾಲಕ್ಕೆ ತಕ್ಕಂತೆ ಆಯಾಯ ಹುದ್ದೆಗಳಲ್ಲಿ ಘನತೆ ಕಡಿಮೆಯಾಗುತ್ತಿದೆ ಎಂದು ತಿಳಿಸಿದರು.

ಗುತ್ತಿಗೆದಾರರು ಹಾಗೂ ಇಂಜಿನಿಯರ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇಬ್ಬರೂ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಪ್ರಸ್ತುತ ಗುತ್ತಿಗೆದಾರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಾಲ ಮಾಡಿ ಕೆಲಸ ಮಾಡಿರುತ್ತಾರೆ. ಸರಿಯಾದ ಸಮಯಕ್ಕೆ ಬಿಲ್ ಬಂದರೆ ಅವರ ಸಮಸ್ಯೆಗಳು ಬಗೆಹರಿಯುತ್ತವೆ ಎಂದರು.

ಜಿಲ್ಲಾ ಗುತ್ತಿಗೆದಾರ ಸಂಘದ ಅಧ್ಯಕ್ಷ ಎಂ.ಎಚ್.ಯತಿರಾಜು, ಕಾರ್ಯದರ್ಶಿ ಕೆ.ರವೀಂದ್ರ, ಗುತ್ತಿಗೆದಾರರಾದ ಸಿ.ತ್ಯಾಗರಾಜು, ಅಶೋಕ್, ಪುಟ್ಟಸ್ವಾಮಿ ಇತರರಿದ್ದರು.

ಇದೇ ಸಂದರ್ಭದಲ್ಲಿ ನಿವೃತ್ತ ಸೂಪರ್‌ಡೆಂಟ್ ಇಂಜಿನಿಯರ್ ಎಂ.ಬಿ.ರಾಜು, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಎಚ್.ಎಸ್.ನಾಗರಾಜು, ನೂತನ ಕಾರ್ಯಪಾಲಕ ಇಂಜಿನಿಯರ್‌ಗಳಾದ ನಂಜುಂಡೇಗೌಡ, ಜಯಂತ್ ಹಾಗೂ ಆ.30ರಂದು ನಿವೃತ್ತಿಯಾಗಲಿರುವ ಇಂಜಿನಿಯರ್ ವಾಸುದೇವಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net