

ಬೈಂದೂರು: ಅರೆಹೊಳೆ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನ ವಾರ್ಷಿಕ ರಥೋತ್ಸವ ಪ್ರಯುಕ್ತ ಥೈಲ್ಯಾಂಡಿನಲ್ಲಿ ಇತ್ತೀಚಿಗೆ ನಡೆದ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಧನ್ವಿ ಪೂಜಾರಿ ಮರವಂತೆ ಹಾಗೂ ವಿವಿಧ ಕ್ಷೇತ್ರದ ಸಾಧಕರಾದ ಸುಭಾಶ್, ಉಮೇಶ್ ಮೊಗವೀರ, ಲಾವಣ್ಯ ಪೂಜಾರಿ, ಭರತ್ ದೇವಾಡಿಗ, ಜಗನ್ನಾಥ ಶೆಟ್ಟಿ ಪೆರ್ಲ ಅವರನ್ನು ಸನ್ಮಾನಿಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಹಕ್ಕಾಡಿ ಜಗದೀಶ್ ಪೂಜಾರಿ, ನಾವುಂದ ಗ್ರಾ.ಪಂ ಅಧ್ಯಕ್ಷ ನರಸಿಂಹ ದೇವಾಡಿಗ, ತಾಪಂ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಯೋಗಗುರು ಸುಬ್ಬಯ್ಯ ದೇವಾಡಿಗ, ಶಿಕ್ಷಕ ಶಶಿಧರ ಶೆಟ್ಟಿ ಮೊದಲಾದವರು ಇದ್ದರು.