ಅನುಭವ ಮಂಟಪದಲ್ಲಿ 150 ಸಾಧಕರ ಸನ್ಮಾನ

Hirehonnalli Basava Anubhava Mantap
Published on

ಕಲಘಟಗಿ: ತಾಲೂಕಿನ ಹಿರೇಹೊನ್ನಳ್ಳಿ ಗ್ರಾಮದಲ್ಲಿ ಕಳೆದ 30 ದಿನಗಳ ಕಾಲ ನಿರಂತರ ನಡೆದ ವಚನ ಶ್ರಾವಣ ಕಾರ್ಯಕ್ರಮ ಸಂಪನ್ನಗೊಂಡಿತು.

ವಚನ ಶ್ರಾವಣ ಕಾರ್ಯಕ್ರಮ ಸಮಾರೋಪದ ಹಿನ್ನೆಲೆಯಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶರಣ-ಶರಣೆಯರು ವಚನಗಳ ಕಟ್ಟುಗಳನ್ನು ಹೊತ್ತು ವಚನ ಘೋಷಣೆ ಹೇಳುತ್ತಾ ಮೆರವಣಿಗೆ ನಡೆಸಿದರು. ಉಳವಿ ಚನ್ನಬಸವೇಶ್ವರ ಗೆಳೆಯರ ಬಳಗದವರು ಎತ್ತುಗಳನ್ನು ಸಿಂಗರಿಸಿ ಚಕ್ಕಡಿಗಳ ಮುಖಾಂತರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಶರಣ ಪರಂಪರೆಯ ಗ್ರಾಮ ಹಿರೇಹೊನ್ನಳ್ಳಿ: ತಿಂಗಳ ಕೊನೆಯ ಕಾರ್ಯಕ್ರಮದಲ್ಲಿ ಧಾರವಾಡದ ಶರಣ ಶಿವಕುಮಾರ ಕಟಗಿ ಮಾತನಾಡಿ, ಬಸವಾದಿ ಪ್ರಥಮರು 12ನೇ ಶತಮಾನದಲ್ಲಿ ಪ್ರಜಾಪ್ರಭುತ್ವದ ನೆಲೆಗಟ್ಟಲ್ಲಿ ಜಾತಿ ಮತ್ತು ಲಿಂಗ ಭೇದ ಮಾಡದೇ ಸರ್ವರಿಗೂ ಸಮಾನತೆ ನೀಡಿದರು. ಹಿರೇಹೊನ್ನಳ್ಳಿ ಗ್ರಾಮದ ಶರಣರ ನಡೆ-ನುಡಿ ಆಚಾರ-ವಿಚಾರಗಳು ಅನುಕರಣೀಯವಾಗಿದೆ. ಕಲಘಟಗಿ ತಾಲೂಕಿನಲ್ಲಿ ಶರಣ ಪರಂಪರೆಗೆ ಗ್ರಾಮ ಹೆಸರಾಗಿದೆ ಎಂದರು.

ತಾಲೂಕಿನಲ್ಲಿ ಸಮಾಜ ಸೇವಕರಾಗಿ ಸಾಧನೆಗೈದಂತಹ ವಿವಿಧ ಕ್ಷೇತ್ರದ 150 ಸಾಧಕರನ್ನು ಅನುಭವ ಮಂಟಪಕ್ಕೆ ಆಹ್ವಾನಿಸಿ, ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಸಾಮಾಜಿಕ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಶರಣರ ಬಳಗದ ಅಧ್ಯಕ್ಷ ಗುರುಲಿಂಗ ಉಣಕಲ್ಲ, ಜಿಪಂ ಮಾಜಿ ಸದಸ್ಯ ವೈ.ಬಿ. ದಾಸನಕೊಪ್ಪ, ದ್ಯಾಮಣ್ಣ ಬಡಿಗೇರ, ಅಶೋಕ ಶಿಲವಂತರ, ತಿಪ್ಪಣ್ಣ ಕುರಗುಂದ, ರಾಜಶೇಖರ ಶೀಲವಂತರ, ಪ್ರಭುಲಿಂಗ ರಂಗಾಪುರ, ನೀಲಪ್ಪ ಮುತ್ತಗಿ, ರಾಮಣ್ಣ ಕೋಟಿ, ಬಸವರಾಜ ಮಾದಿ, ಶಂಕರ ದಾಸನಕೊಪ್ಪ, ಶಿವರುದ್ರ ಧನಿಗೊಂಡ, ನೀಲಪ್ಪ ಹಿರೇಗುಂಜಾಳ ಮಾತನಾಡಿದರು. ಬಸವಣ್ಣೆಪ್ಪ ಧನಿಗೊಂಡ, ರಮೇಶ ಮಡಿವಾಳರ, ಬಸವರಾಜ ಮಾದಿ, ಶಶಿ ಕೋಟಿ, ಶೇಖಪ್ಪ ಕುಸುಗಲ್ಲ, ಅಪ್ಪಣ್ಣ ಜಮ್ಮಿಹಾಳ, ರಾಜುಉಳವಪ್ಪ ಮಾಸ್ತರ, ಯಲ್ಲಪ್ಪ ಕುರುಬರ, ಚಿದಾನಂದ ಸಿದ್ದವಿರಣ್ಣವರ, ಪಾರಮ್ಮ ದೇಸೂರ, ಅನ್ನಪೂರ್ಣಾ ದೇಸೂರ, ಬಸವರಾಜ ಕೆಳಗಿನಮನಿ, ಹಿರೇಹೊನ್ನಿಹಳ್ಳಿ ಬಸವತತ್ವ ಲಿಂಗಾನುಭಾವಿ ಶರಣರ ಬಳಗ, ಅನುಭವ ಮಂಟಪದ ಸದಸ್ಯರು, ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಬಸವ ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net