ಅ.6 ರಂದು ಆರ್.ಎಂ.ಮAಜುನಾಥ ಗೌಡಗೆ ಸನ್ಮಾನ

30 smg Rmm
Published on

ತೀರ್ಥಹಳ್ಳಿ: ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ 10ನೇ ಬಾರಿಗೆ ಆಯ್ಕೆಯಾಗಿರುವ ಆರ್.ಎಂ.ಮAಜುನಾಥ ಗೌಡರಿಗೆ ಅ.6 ರಂದು ತಾಲೂಕಿನ ಸಹಕಾರ ಸಂಸ್ಥೆಗಳಿAದ ಪಟ್ಟಣದ ಗೋಪಾಲಗೌಡ ರಂಗಮAದಿರದಲ್ಲಿ ಅದ್ದೂರಿಯ ತೌರೂರ ಸಂಮಾನ ನೀಡಲು ತೀರ್ಮಾನಿಸಿದ್ದೇವೆ ಎಂದು ಸಮಿತಿಯ ಮುಖ್ಯಸ್ಥ ಎಚ್.ಎನ್.ವಿಜಯದೇವ್ ಹೇಳಿದರು.
ತೀರ್ಥಹಳ್ಳಿ ತಾಲೂಕು ಮಾತ್ರವಲ್ಲದೇ ಶಿವಮೊಗ್ಗ ಜಿಲ್ಲೆಯ ಸಹಕಾರ ಕ್ಷೇತ್ರದ ಅಭಿವೃದ್ಧಿಯಲ್ಲಿ ಆರ್.ಎಂ.ಮAಜುನಾಥಗೌಡರ ಪಾತ್ರ ಪ್ರಮುಖವಾಗಿದೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿ ಸಹಕಾರ ರತ್ನ ಪ್ರಶಸ್ತಿಗೂ ಪಾತ್ರರಾಗಿದ್ದು, ಡಿಸಿಸಿ ಬ್ಯಾಂಕಿಗೆ ಅಧ್ಯಕ್ಷರಾಗಿ ಮರು ಆಯ್ಕೆಗೊಂಡಿರುವುದರಿAದ ತಾಲೂಕಿನ ಸಮಸ್ತ ಸಹಕಾರಗಳು ಸೇರಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಹಕಾರ ಕ್ಷೇತ್ರದ ಸರ್ವರೂ ಈ ಸಮಾರಂಭದಲ್ಲಿ ಪಾಲ್ಗೊಳ್ಳಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ತುಳುನಾಡು ಸಿರಿ ಸಹಕಾರ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net