

ಮೈಸೂರು: ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಜೀವಧಾರ ರಕ್ತನಿಧಿ ಕೇಂದ್ರದಿಂದ 15ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದವರನ್ನು ಸನ್ಮಾನಿಸಲಾಯಿತು.
ನ್ಯೂ ಸಯ್ಯಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತ ನಿಧಿ ಕೇಂದ್ರದ ಆವರಣದಲ್ಲಿ ಕಾರ್ಯಕ್ರಮದಲ್ಲಿ ರಕ್ತದಾನಿಗಳಾದ ನವೀನ್, ಕಾಂತಿಲಾಲ್ ಸಂದೇಶ, ವೈ.ಎಸ್.ಮಂಜುನಾಥ್, ಯಶ್ವಂತ್, ರಶ್ಮಿ ಶರ್ಮಾ, ಪರಾಶ್ರಮ ಬೋರನ, ರಾಹುಲ್ ಕೊಠಾರಿ, ಮೀನಾಕ್ಷಿ ಕೊಠಾರಿ, ಮನೀಶ್‌ಜೈನ್, ವನಿತಾ ಡಕ್, ಮುಕೇಶ್ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ 100ಕ್ಕೂ ಹೆಚ್ಚು ಬಾರಿ ಸ್ವಯಂಪ್ರೇರಿತ ರಕ್ತದಾನ ಮಾಡಿದ ದೇವೇಂದ್ರ ಪರಿಹಾರಿಯ ಅವರಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸಲಾಯಿತು.
ಸನ್ಮಾನ ನೇರವೇರಿಸಿದ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ರಕ್ತದಾನದಿಂದ ಶರೀರದಲ್ಲಿ ಚೈತನ್ಯ ಶಕ್ತಿಯು ಹೆಚ್ಚಾಗಿ ದೇಹದಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಕಾಣಬಹುದು. ರಕ್ತದಾನದ ಬಗ್ಗೆ ಅರಿವು ಮೂಡಿದ ಸುತ್ತಮುತ್ತಲಿನವರನ್ನು ಪ್ರೇರೇಪಿಸಿಸುವಂತೆ ತಿಳಿಸಿದರು.
ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್, ಬ್ಲಡ್ ಆನ್ ಕಾಲ್ ಕ್ಲಬ್ ಮೈಸೂರು ದೇವೇಂದ್ರ ಪರಿಹಾರಿಯ, ಆನಂದ್ ಮಾಂದೋಟ್, ಮಹಾವೀರ ಜೈನ, ಸಪ್ನ, ಮಮತಾ, ಸದಾಶಿವ ಇತರರು ಇದ್ದರು.