ರಾಜ್ಯಕ್ಕೆ 7ನೇ ಸ್ಥಾನ ಪಡೆದ ರೀನಾ ರಾವುತ್‌ಗೆ ಸನ್ಮಾನ

h20-reena rahut
Published on

ಹುಬ್ಬಳ್ಳಿ: ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 594 ಅಂಕ ಪಡೆದು ರಾಜ್ಯಕ್ಕೆ ಏಳನೇ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ರೀನಾ ರಾವುತ್ ಅವರನ್ನು ಇಲ್ಲಿಯ ಲಿಂಗರಾಜ ನಗರದ ಆದರ್ಶ ವಿಜ್ಞಾನ ಕಾಲೇಜ್‌ನಲ್ಲಿ ಮಂಗಳವಾರ ಸನ್ಮಾನಿಸಲಾಯಿತು.

ಸಂಸ್ಥೆ ಅಧ್ಯಕ್ಷ ಲಿಂಗರಾಜ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಮಾಧ್ಯಮದ ವಿದ್ಯಾರ್ಥಿನಿಯಾದರೂ ರೀನಾ ರಾಜ್ಯಕ್ಕೆ ಏಳನೇ ರ‌್ಯಾಂಕ್ ಪಡೆದಿರುವುದು ಖುಷಿಯ ವಿಚಾರ. ಕನ್ನಡ 100, ಗಣಿತ 100, ಭೌತಶಾಸ್ತ್ರ 100, ಸಂಖ್ಯಾಶಾಸ್ತ್ರ 100, ರಸಾಯನಶಾಸ್ತ್ರ 99 ಹಾಗೂ ಇಂಗ್ಲಿಷ್‌ನಲ್ಲಿ 95 ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇದೇ ಸಾಧನೆ ಮುಂದುವರಿಯಲಿ ಎಂದು ಆಶಿಸಿದರು.

ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸಾವಕಾರ ಮಾತನಾಡಿ, ರೀನಾ ಮಾಡಿರುವ ಸಾಧನೆ ಅಗಾಧವಾದದು ಎಂದರು.

ನಿರ್ದೇಶಕರಾದ ಪ್ರೊ.ಎಸ್.ಬಿ. ಕುನ್ನೂರ, ಪ್ರೊ.ಬಿ.ಸಿ. ಗೌಡರ, ಡ್ಯಾನಿಯಲ್ ಹೊಸಕೇರಿ ಮಾತನಾಡಿದರು.

ಪ್ರಾಚಾರ್ಯೆ ಸುನಂದಾ ಮೆಣಸಿನಕಾಯಿ, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net