ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

04
Published on

ಸುಳ್ಯ: ಈ ಬಾರಿಯ ದ.ಕ.ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಸುಳ್ಯದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್‌ನಲ್ಲಿರುವ ಸ್ವಣರ್ಂ ಜ್ಯುವೆಲ್ಸ್‌ನಲ್ಲಿ ನಡೆಯಿತು.

ಜಿಲ್ಲಾ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕರಾದ ಎಣ್ಮೂರು ಪ್ರೌಢಶಾಲಾ ಚಿತ್ರಕಲಾ ಶಿಕ್ಷಕ ಮೋಹನ್, ದೇವಚಳ್ಳ ಶಾಲೆಯ ಮುಖ್ಯಶಿಕ್ಷಕ ಶ್ರೀಧರ ಗೌಡ ಕೆರೆಮೂಲೆ ಹಾಗೂ ಬೆಂಡೋಡಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಲಲಿತಾ ಕುಮಾರಿ ಅವರನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ ಸನ್ಮಾನಿಸಿದರು.

ಚಂದ್ರಶೇಖರ್ ನಂಜೆ, ಸಂಸ್ಥೆಯ ಪಾಲುದಾರರಾದ ಸಂಜೀವ, ಪ್ರವೀಣ್ ಬಿ.ಗೌಡ, ಭವಿತ್, ಲೋಕೇಶ್ ಹಾಗೂ ಸಿಬ್ಬಂದಿ ಶೋಧನ್, ಪತ್ರಕರ್ತರಾದ ತೇಜೇಶ್ವರ ಕುಂದಲ್ಪಾಡಿ, ಕೆ.ಟಿ.ಭಾಗೀಶ್, ಶ್ರೀಜಿತ್ ಸಂಪಾಜೆ ಮೊದಲಾದವರಿದ್ದರು. ಪತ್ರಕರ್ತ ಯಶ್ವಿತ್ ಕಾಳಮ್ಮನೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net