ಐ.ಎಂ.ಎ ವತಿಯಿಂದ ಸನ್ಮಾನ

dr sanmana
Published on

ಮಡಿಕೇರಿ: ಸಾಹಿತ್ಯ ಕತಿಗಾಗಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಕೆ.ಬಿ.ಸೂರ್ಯಕುಮಾರ್ ಮತ್ತು ವೃತ್ತಿ ಜೀವನದ ಸಾಧನೆಗಾಗಿ ಪ್ರಶಸ್ತಿಗೆ ಭಾಜನರಾದ ಡಾ.ರವಿ ಅಪ್ಪಾಜಿ ಅವರನ್ನು ಭಾರತೀಯ ಮೆಡಿಕಲ್ ಅಸೋಸಿಯೇಷನ್‌ನ ಕೊಡಗು ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಮಂಗಳಮುಖಿಯ ಜೀವನಗಾಥೆಯಾದ ಮಂಗಳಿ ಕೃತಿಗಾಗಿ ರಾಜ್ಯ ವೈದ್ಯ ಬರಹಗಾರರ ಸಂಘದಿಂದ ಪ್ರಶಸ್ತಿ ಪಡೆದ ಮಡಿಕೇರಿಯ ಡಾ.ಕೆ.ಬಿ.ಸೂರ್ಯಕುಮಾರ್ ಮತ್ತು ರಾಜ್ಯಮಟ್ಟದ ಹೆಲ್ತ್ ಕೇರ್ ಪ್ರಶಸ್ತಿ ಪಡೆದ ಮಡಿಕೇರಿಯ ಡಾ.ರವಿ ಅಪ್ಪಾಜಿ ಅವರನ್ನು ಭಾರತೀಯ ಮೆಡಿಕಲ್ ಅಸೋಸಿಯೇಷನ್‌ನ ಕೊಡಗು ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಭಾರತೀಯ ಮೆಡಿಕಲ್ ಅಸೋಸಿಯೇಷನ್‌ನ ಕೊಡಗು ಘಟಕದ ಅಧ್ಯಕ್ಷ ಡಾ.ಶಾಮ್ ಅಪ್ಪಣ್ಣ, ಡಾ.ಪಾತಿಮ, ಡಾ.ಕೆ.ಬಿ.ಮುತ್ತಪ್ಪ ಮತ್ತು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಸಿ.ಆರ್.ಪ್ರಶಾಂತ್ ಅವರು ಸಾಧಕ ವೈದ್ಯರನ್ನು ಗೌರವಿಸಿದರು. ಕಾರ್ಯಕ್ರಮದಲ್ಲಿ ಮೈಸೂರಿನ ನಾರಾಯಣ ಹದಯಾಲಯದ ತಜ್ಞ ವೈದ್ಯರಾದ ಡಾ.ಲೇಪಾಕ್ಷಿ, ಡಾ.ವಿದ್ಯಾ, ಡಾ.ನಿಶ್ಚಲ್ ರಾಜ್ ಅವರು ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆಯ ಇತ್ತೀಚಿನ ವಿದ್ಯಮಾನಗಳ ಬಗ್ಗೆ ವೈದ್ಯರಿಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net