ವಿದ್ಯಾವರ್ಧಕ ಸಂಘಕ್ಕೆ ಅನುದಾನ ಕೊರತೆ ಬೇಸರದ ಸಂಗತಿ

6 Dwd 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕನ್ನಡ ನಾಡು- ನುಡಿಯ ಅಸ್ಮಿತೆ ಕರ್ನಾಟಕ ವಿದ್ಯಾವರ್ಧಕ ಸಂಘ. 135 ವರ್ಷ ಕಂಡ ಸಂಘ ಸರ್ಕಾರದ ಅನುದಾನ ಕೊರತೆ ಎದುರಿಸುತ್ತಿರುವುದು ಬೇಸರದ ಸಂಗತಿ ಎಂದು ಹಿರಿಯ ಸಾಹಿತಿ ಡಾ. ಕುಂ. ವೀರಭದ್ರಪ್ಪ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು `ನಾಡೋಜ' ಗೌರವ ಪುರಸ್ಕೃತರಿಗೆ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಪಾಟೀಲ ಪುಟ್ಟಪ್ಪ ಬಹುದೊಡ್ಡ ಸಂಘಟಕ. ಅವರು ವಿದ್ಯಾವರ್ಧಕ ಸಂಘವನ್ನು ಕಟ್ಟಿ ಬೆಳೆಸಿದರು. ಸಂಘ ಕಾರ್ಯಚಟುವಟಿಕೆ ಕೇವಲ ಬಾಡಿಗೆ ಕಟ್ಟಡಗಳಿಂದ ಬರುವ ಹಣದಲ್ಲಿ ನಡೆಯಲಾರದು. ಅನುದಾನ ನಮ್ಮ ಹಕ್ಕು. ಅದನ್ನು ಪಡೆಯಲು ಪದಾಽಕಾರಿಗಳೊಂದಿಗೆ ವಿಧಾನಸೌಧದ ಎದುರು ಧರಣಿ ಕುಳಿತುಕೊಳ್ಳಲು ಸಿದ್ಧ ಎಂದರು.

ನನ್ನನ್ನು ಲೇಖಕ, ಹೋರಾಟಗಾರನನ್ನಾಗಿ ರೂಪಿಸಿದ್ದು ಧಾರವಾಡ. ಇಲ್ಲಿನ ವಿದ್ಯಾವರ್ಧಕ ಸಂಘದಿAದ ಸನ್ಮಾನ ಸ್ವೀಕರಿಸಿದ್ದು ಅವಿಸ್ಮರಣೀಯ ಎಂದರು.

ಸAಘದಿAದ ಸನ್ಮಾನ ಸ್ವೀಕರಿಸಿದ ಪದ್ಮಶ್ರೀ ಡಾ. ಎಂ. ವೆಂಕಟೇಶಕುಮಾರ ಮಾತನಾಡಿ, ಸಂಘ ನನ್ನಂಥ ಹತ್ತಾರು ಕಲಾವಿದರನ್ನು ಗುರುತಿಸಿ ಪೋಷಿಸುತ್ತ ಬಂದಿದೆ. ಈ ಪ್ರೀತಿ ಸದಾ ಇರಲಿ ಎಂದು ಆಶಿಸಿದರು.

ಕನ್ನಡ ವಿಶ್ವವಿದ್ಯಾಲಯದ `ನಾಡೋಜ' ಗೌರವ ಪುರಸ್ಕೃತರಾದ ಸಂಘದ ಗೌರವ ಉಪಾಧ್ಯಕ್ಷ ಪಂ. ಎಂ. ವೆಂಕಟೇಶಕುಮಾರ ಹಾಗೂ ವಿಜಯನಗರ ಜಿಲ್ಲೆಯ ಕೊಟ್ಟೂರಿನ ಹಿರಿಯ ಸಾಹಿತಿ ಡಾ. ಕುಂ. ವೀರಭದ್ರಪ್ಪ ಅವರನ್ನು ಸಂಘದಿAದ ಗೌರವ ಸನ್ಮಾನ ಮಾಡಲಾಯಿತು.

ಹಿರೇಮಲ್ಲೂರ ಈಶ್ವರನ್ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಶಶಿಧರ ತೋಡಕರ ಪಂ. ಎಂ. ವೆಂಕಟೇಶಕುಮಾರ ಕುರಿತು ಮತ್ತು ಸಾಹಿತಿ ಚನ್ನಪ್ಪ ಅಂಗಡಿ ಡಾ. ಕುಂ. ವೀರಭದ್ರಪ್ಪ ಕುರಿತು ಅಭಿನಂದನಾ ನುಡಿಗಳನ್ನಾಡಿದರು.

ಸಂಘದ ಅಧ್ಯಕ್ಷ ಚಂದ್ರಕಾAತ ಗುರಪ್ಪ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಡಾ. ಆನಂದ ಪಾಂಡುರAಗಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಡಾ. ಧನವಂತ ಹಾಜವಗೋಳ ನಿರೂಪಿಸಿದರು.

ಶಂಕರ ಹಲಗತ್ತಿ, ಬಸವಪ್ರಭು ಹೊಸಕೇರಿ, ಡಾ. ಸಂಜೀವ ಕುಲಕರ್ಣಿ, ಶಿವಾನಂದ ಭಾವಿಕಟ್ಟಿ, ಸತೀಶ ತುರಮರಿ, ವಿಶ್ವೇಶ್ವರಿ ಹಿರೇಮಠ, ಡಾ. ಜಿನದತ್ತ ಹಡಗಲಿ, ಗುರು ಹಿರೇಮಠ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net