ಗೌರವ ಸನ್ಮಾನ, ಯಕ್ಷಗಾನ ಪ್ರದರ್ಶನ ನಾಳೆ

New Yakshagana New
Published on

ಸಿದ್ದಾಪುರ: ತಾಲೂಕಿನ ಪೂಜಾರಿಕೊಪ್ಪ, ಅರಿಶಿನಗೋಡ ಹಾಗೂ ಕೋಣೆಗದ್ದೆಯ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ 8ನೇ ವರ್ಷದ ಸಮಾರಾಧನೆ ಪ್ರಯುಕ್ತ ವಿವಿಧ ಧಾರ್ವಿುಕ ಕಾರ್ಯಕ್ರಮ, ಗೌರವ ಸನ್ಮಾನ ಮತ್ತು ಯಕ್ಷಗಾನ ಪ್ರದರ್ಶನ ಮಾ. 17ರಂದು ನಡೆಯಲಿದೆ.

ಅಂದು ಬೆಳಗ್ಗೆ ದೇವಸ್ಥಾನದಲ್ಲಿ ಕಲಾವೃದ್ಧಿ ಹೋಮ, ರುದ್ರಹೋಮ, 108 ಶ್ರೀ ಸತ್ಯನಾರಾಯಣ ಕಳಸ ಪೂಜೆ, ಗಣಹೋಮ, ಕುಂಕುಮಾರ್ಚನೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ 8ರಿಂದ ಯಕ್ಷಗಾನ ಭಾಗವತ ಪರಮೇಶ್ವರ ನಾಯ್ಕ ಕಾನಗೋಡು ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದ ಜೈಕುಮಾರ ನಾಯ್ಕ ಮೆಣಸಿ ಅವರಿಗೆ ಗೌರವ ಸನ್ಮಾನ ನಡೆಯಲಿದೆ.

ಉದ್ಯಮಿ ಅಶ್ವಿನ್ ಭೀಮಣ್ಣ ನಾಯ್ಕ ಕಾರ್ಯಕ್ರಮ ಉದ್ಘಾಟಿಸುವರು. ಹಾರ್ಸಿಕಟ್ಟಾ ಗ್ರಾಪಂ ಪಿಡಿಒ ರಾಜೇಶ ನಾಯ್ಕ ಅಧ್ಯಕ್ಷತೆ ವಹಿಸುವರು. ಗ್ರಾಪಂ ಉಪಾಧ್ಯಕ್ಷ ಸಿದ್ದಾರ್ಥ ಡಿ. ಗೌಡರ್, ಡಾ.ಕೆ. ಶ್ರೀಧರ ವೈದ್ಯ ಸಿದ್ದಾಪುರ, ಧನಂಜಯ ಎನ್. ನಾಯ್ಕ ಪೂಜಾರಿಕೊಪ್ಪ, ಎನ್.ವಿ. ಹೆಗಡೆ ಮುತ್ತಿಗೆ, ಅಶೋಕ ನಾಯ್ಕ ಹಾರ್ಸಿಕಟ್ಟಾ, ಕೆ.ಆರ್. ವಿನಾಯಕ, ಕೃಷ್ಣಬಾಯಿ ಶಾನಭಾಗ, ಆರ್.ಬಿ. ಗೌಡ ಹೊಸ್ಕೊಪ್ಪ ಇತರರು ಉಪಸ್ಥಿತರಿರುವರು.

ನಂತರ ಮಾರುತಿ ಪ್ರಸಾದಿತ ಯಕ್ಷಗಾನ ಮಂಡಳಿ ಬೇಡ್ಕಣಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಗದಾಯುದ್ಧ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net