

ಬ್ಯಾಡಗಿ: ಸ್ಥಳೀಯ ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲರ ಸಾಮಾಜಿಕ ಸೇವೆ ಹಾಗೂ ಡಾ.ಶಂಕರರಾವ್ ಪೇಟ್ಕರ್ ಆರೋಗ್ಯ ಜಾಗೃತಿಯನ್ನು ಗುರುತಿಸಿ ಪ್ರತಿಷ್ಠಿತ ದಿ. ಅಮೆರಿಕನ್ ಇಂಟನ್ಯಾಷನಲ್ ಯೂನಿವರ್ಸಿಟಿ (ಯುಎಸ್ಎ-ಎಯುಜಿಪಿ) ಇಬ್ಬರಿಗೂ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ದೆಹಲಿಯ ಗಾಲಿಬ್ ಆಡಿಟೋರಿಯಲ್ ಹಾಲ್ನಲ್ಲಿ ದ್ ರೈಟ್ ಪ್ಲೇಸ್ ಫಾರ್ಯುು ಫೌಂಡೇಷನ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಶಸ್ತಿ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಅವರ ದ್ವಿತೀಯ ಪುತ್ರ ಬಾಲಚಂದ್ರ ಪಾಟೀಲ ಅವರು ಯುವಸೇನೆ ಮೂಲಕ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದರಿಮದ ಗೌರವ ಡಾಕ್ಟರೇಟ್ ಲಭಿಸಿದೆ.
ಡಾ. ಶಂಕರರಾವ್ ಪೇಟ್ಕರ ಅವರು ಬಾಲಕಿಯರು ಹಾಗೂ ಮಹಿಳೆಯರ ಋತುಚಕ್ರ ಸೇರಿ ವಿವಿಧ ಆರೋಗ್ಯ ಜಾಗೃತಿ ಮೂಡಿಸುವ ಮೂಲಕ ಜನಮಾನಸರಾಗಿದ್ದಾರೆ. ಮಾಜಿ ಸೈನಿಕರಾಗಿರುವ ಇವರ ಸೇವೆ ಗುರುತಿಸಿ ಗೌರವ ಡಾಕ್ಟರೇಟ್ ನೀಡಲಾಗಿದೆ.