

ಧಾರವಾಡ: ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನದಲ್ಲಿ ವಿಶಿಷ್ಟ ಪಾಂಡಿತ್ಯ ಹೊಂದಿರುವ ನಗರದ ಜಯದೇವ ಹಿರೇಮಠ ಅವರ ಜೀವಮಾನ ಸಾಧನೆ ಪರಿಗಣಿಸಿ ಅಮೆರಿಕದ ಸೆಂಟ್ರಲ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದೆ. ಅಮೆರಿಕನ್ ಯುನಿರ್ವಸಿಟಿ ಆಫ್ ಕುವೈತ್ ಹಾಗೂ ಇಂಡಸ್ಟಿçಯಲ್ ಬ್ಯಾಂಕ್ ಆಫ್ ಕುವೈತ್ ಸಂಸ್ಥೆಗಳ ಸಂಲಗ್ನತೆಯೊAದಿಗೆ ಅಲ್ಲಿಯ ಗ್ರಂಥಾಲಯಗಳನ್ನು ಹೊಸ ವಿನ್ಯಾಸ ಮತ್ತು ಮಾಹಿತಿ ವಿಜ್ಞಾನದೊಂದಿಗೆ ಆಧುನೀಕರಣಗೊಳಿಸುವಲ್ಲಿ ಜಯದೇವ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ತಂತ್ರಜ್ಞಾನವನ್ನು ಪರಿಚಯಿಸಿ, ಗ್ರಂಥಾಲಯ ಮತ್ತು ಮಾಹಿತಿ ಸೇವೆಗಳ ಹಂಚಿಕೆಯಲ್ಲಿ ಪರಿಣಾಮಕಾರಿತ್ವ ಹಾಗೂ ವೇಗವನ್ನು ತರುವುದರ ಮೇಲೆ ಇವರ ಚಿಂತನೆ ಕೇಂದ್ರೀಕೃತವಾಗಿದೆ.