ಅಸಂಖ್ಯಾತ ಭಕ್ತರಿಗೆ ಗೌರವ ಡಾಕ್ಟರೇಟ್ ಸಮರ್ಪಣೆ

PH 14
Published on

ಶಹಾಬಾದ್: ಧರ್ಮ ಕಾರ್ಯದ ಜತೆಗೆ ಸಮಾಜದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ್ದೇನೆ. ನಾಡಿನಾದ್ಯಂತ ಸಂಚರಿಸಿ ಸುಮಾರು 2 ಸಾವಿರಕ್ಕೂ ಅಧಿಕ ಕಾರ್ಯಕ್ರಮಗಳನ್ನು ಮಾಡಿದ್ದೇನೆ. ಭಕ್ತರ ಸಹಕಾರದಿಂದಲೇ ಇದೆಲ್ಲವೂ ಸಾಧ್ಯವಾಗಿದ್ದು, ಗೌರವ ಡಾಕ್ಟರೇಟ್ ಅಸಂಖ್ಯಾತ ಭಕ್ತರಿಗೆ ಸಮರ್ಪಿಸುತ್ತಿದ್ದೇನೆ ಎಂದು ತೊನಸನಳ್ಳಿ (ಎಸ್) ಅಲ್ಲಮಪ್ರಭು ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ಮಲ್ಲಣ್ಣಪ್ಪ ಮಹಾರಾಜ ನುಡಿದರು.

ಅಮೆರಿಕಾದ ಗ್ಲೋಬಲ್ ಹ್ಯುಮನ್ ಪೀಸ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪಡೆದಿದ್ದಕ್ಕಾಗಿ ಮಾಲಗತ್ತಿಯಲ್ಲಿ ಮಂಗಳವಾರ ಗ್ರಾಮಸ್ಥರಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಪುಟ್ಟ ಗ್ರಾಮದಲ್ಲಿ ಅತ್ಯಂತ ಸಂಭ್ರಮದಿAದ ಕಾರ್ಯಕ್ರಮ ಮಾಡಿದ್ದೀರಿ, ಇದು ಎಲ್ಲ ಗುರುಗಳಿಗೆ ವಂದನೆ ಮಾಡಿದಂತೆ. ಇಲ್ಲಿನ ಭಕ್ತರ ಮನಸ್ಸು ದೊಡ್ಡದಾಗಿದ್ದು, ಎಲ್ಲ ಗುರುಗಳ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ಹಾರೈಸಿದರು.

ಜಿಪಂ ಮಾಜಿ ಅಧ್ಯಕ್ಷ ಡಾ.ಅಂಬಾರಾಯ ಅಷ್ಟಗಿ, ಮಾಜಿ ಸದಸ್ಯ ಡಾ.ಗುಂಡಣ್ಣ ಬಾಳಿ ಮಾತನಾಡಿದರು. ಪೇಠಶಿರೂರಿನ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀ ಚನ್ನಬಸವ ಶರಣು ಸಾನ್ನಿಧ್ಯ ವಹಿಸಿದ್ದರು.

ಗ್ರಾಪಂ ಅಧ್ಯಕ್ಷ ಸದಾಶಿವ ಸಿಂಘೆ, ಪ್ರಮುಖರಾದ ಜೆ.ಡಿ.ಪಾಟೀಲ್, ಫಕೀರೇಶ ಗದಗ, ಶರಣು ಸಣಮೋ, ಬಸವರಾಜ ಪೊಲೀಸ್ ಪಾಟೀಲ್, ಧರ್ಮರಾಯ ಸಣಮೋ, ಬಾಲಕೃಷ್ಣ ಜೋಶಿ, ಚಂದ್ರಶೇಖರ ರಾವೂರ, ಮಲ್ಕಪ್ಪ ಸಿದ್ದಣ್ಣ ಸಾಹು, ಶಿವಾನಂದ ಪೊಲೀಸ್ ಪಾಟೀಲ್, ಮರೆಣ್ಣ ಮೂಲಿಮನಿ, ಮಲ್ಲು ತಳವಾರ, ವಿಜಯಕುಮಾರ ಕಟ್ಟಿ, ಶಿವಶರಣಪ್ಪ ಬಿರಾಳ, ರಾಜೇಂದ್ರ ತಳವಾರ, ನಾನಾ ಸಾಹೇಬ್, ದೇವಪ್ಪ ಸಣಮೋ, ಹಣಮಂತ ಬಾಳಕ, ಮೈಲಾರಿ ಇತರರಿದ್ದರು.

ಮಹಾಂತೇಶ ಹುಲ್ಲೂರ ಹಾಸ್ಯ ಕಾರ್ಯಕ್ರಮ ನಡೆಸಿದರು. ಈಶ್ವರ ಮುಗುಳನಾಗಾಂವ್ ನಿರೂಪಣೆ ಮಾಡಿದರು. ಮಲ್ಲಿಕಾರ್ಜುನ ಇಟಗಿ ಸ್ವಾಗತಿಸಿದರು. ಚೆಸ್ ಪಂದ್ಯದಲ್ಲಿ ರಾಷ್ಟç ಮಟ್ಟಕ್ಕೆ ಆಯ್ಕೆಯಾದ ಪ್ರದೀಪ್ ಪಾಟೀಲ್, ಪಿಎಚ್.ಡಿ ಪದವಿ ಪಡೆದ ಅನ್ನಪೂರ್ಣ ರಾವೂರ, ಯೋಗ ಶಿಕ್ಷಕ ನಾಗರಾಜ ಸಾಲೊಳ್ಳಿ ಅವರನ್ನು ಸತ್ಕರಿಸಿಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net