ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ ಪ್ರಕಟ

Published on
ಬೆಂಗಳೂರು: ಕನ್ನಡ ಹಾಗೂ ಇತರ ಭಾಷೆಗಳ ನಡುವೆ ಭಾಷಾಂತರದಲ್ಲಿ ವಿಶೇಷ ಸಾಧನೆ ಮಾಡಿರುವ ವಿದ್ವಾಂಸರಿಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು 2023 ಹಾಗೂ 2024ನೇ ಸಾಲಿನ ಗೌರವ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು, 2023 ನೇ ಸಾಲಿಗೆ ಪ್ರೊ. ಹೆಚ್.ಎಸ್.ರಾಘವೇಂದ್ರರಾವ್, ವಿನಯ್ ಚೈತನ್ಯ, ಡಾ.ನಟರಾಜ್ ಹುಳಿಯಾರ್, ಡಾ.ದು.ಸರಸ್ವತಿ, ಡಾ.ಹೆಚ್.ಎಂ.ಕುಮಾರಸ್ವಾಮಿ ಹಾಗೂ 2024 ನೇ ಸಾಲಿಗೆ ಡಾ.ಆರ್.ಕೆ.ಕುಲಕರ್ಣಿ, ಡಾ.ಕರೀಗೌಡ ಬೀಚನಹಳ್ಳಿ, ಡಾ.ರಾಜೇಂದ್ರ ಜೆನ್ನಿ, ಡಾ.ಬೊಡೇ ರಿಯಾಜ್ ಅಹಮದ್ ಮತ್ತು ಡಾ.ಬಸು ಬೇವಿನಗಿಡದ ಅವರು ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಗೌರವ ಪ್ರಶಸ್ತಿಯ ಮೊತ್ತ ರೂ.50,000/- ಆಗಿರುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net