ಅಂಗನವಾಡಿಯ ಬಾಡಿಗೆ ಹಣ ಪಾವತಿ ಮಾಡಿ

Untitled design (7)
ಸಿಂಧನೂರಿನ ತಹಸೀಲ್ದಾರ್ ಅರುಣ ದೇಸಾಯಿಗೆ ಅಂಗನವಾಡಿ ಕಾರ್ಯರ್ತೆಯರ ಮತ್ತು ಸಹಾಯಕಿಯತ ಫೆಡರೇಷನ್ ತಾಲೂಕು ಸಮಿತಿ ಮನವಿ ಸಲ್ಲಿಸಿತು. ಫೆಡರೇಷನ್ ರಾಜ್ಯ ಸಮಿತಿ ಸದಸ್ಯ ಎಂ.ತಿಪ್ಪಯ್ಯಶೆಟ್ಟಿ, ಗೌರವಾಧ್ಯಕ್ಷ ಡಿ.ಎಚ್.ಕಂಬಳಿ, ತಾಲೂಕು ಕಾರ್ಯದರ್ಶಿ ಆದಿಲಕ್ಷ್ಮೀ, ತಾಲೂಕು ಅಧ್ಯಕ್ಷೆ ಗಿರಿಜಮ್ಮ ಇದ್ದರು.
Published on

ಸಿಂಧನೂರು: ಗೌರವಧನ ಹೆಚ್ಚಳ ಮಾಡಲು ಒತ್ತಾಯಿಸಿ ಅಂಗನವಾಡಿ ಕಾರ್ಯರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ತಾಲೂಕು ಸಮಿತಿ ನಗರದ ತಹಸಿಲ್ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿತು.

6ನೇ ಗ್ಯಾರಂಟಿ ಜಾರಿಗೊಳಿಸಿ

ಸರ್ಕಾರ ವಿವಿಧ ಇಲಾಖೆಗಳು ಪರ್ಯಾಯವಾಗಿ ಶಿಶು ಪಾಲನಾ ಕೇಂದ್ರ ಮತ್ತು ಶಾಲಾ ಪೂರ್ವ ಶಿಕ್ಷಣ ತರಗತಿಗಳನ್ನು ತರೆಯಲು ಆದೇಶ ನೀಡಿದೆ. ಕೂಡಲೇ ಇದನ್ನು ಹಿಂಪಡೆಯಬೇಕು. ಅಲ್ಲದೆ ಗೌರವಧನ ಹೆಚ್ಚಳದ 6ನೇ ಗ್ಯಾರಂಟಿ ಜಾರಿಗೊಳಿಸಿ ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ರೂ., ಸಹಾಯಕರಿಗೆ 10 ಸಾವಿರ ರೂ. ಗೌರವಧನ ನೀಡುವ ಜತೆಗೆ ನಿವೃತ್ತರಿಗೆ 3 ಲಕ್ಷ ರೂ. ಇಡಿಘಂಟು ನೀಡಬೇಕು ಎಂದು ಒತ್ತಾಯಿಸಿದರು.

ಶಾಲಾ ಪೂರ್ವ ತರಗತಿ ನಡೆಸಲು ವಿಶೇಷ ಸೌಲಭ್ಯ ಒದಗಿಸಿ

ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ತರಗತಿ ನಡೆಸಲು ವಿಶೇಷ ಸೌಲಭ್ಯ ಒದಗಿಸಬೇಕು. ಈಗಾಗಲೇ ನೀಡಿರುವ ಮೊಬೈಲ್ ಸಕ್ರಿಯವಾಗಿಲ್ಲ. ಇದನ್ನು ಸರಿಪಡಿಸಬೇಕು. ಪೋಷಣೆ ಅಭಿಯಾನ ಕಾರ್ಯಕ್ರಮವನ್ನು ಕಡಿಮೆ ವೆಚ್ಚದಲ್ಲಿ ಮಾಡಿಸಬೇಕು. ತರಕಾರಿ ಬಿಲ್ಲುಗಳನ್ನು ಕನಿಷ್ಠ ಮೂರು ತಿಂಗಳಿಗೊಮ್ಮೆ ಪಾವತಿಸಬೇಕು. ಅಂಗನವಾಡಿ ಕೇಂದ್ರ ಬಾಡಿಗೆ ಹಣ 6-8 ತಿಂಗಳಿಂದ ಪಾವತಿಸಿಲ್ಲ, ಈ ಬಗ್ಗೆ ಕ್ರಮಕೈಗೊಳ್ಳಬೇಕು ಆಗ್ರಹಿಸಿದರು.
ಫೆಡರೇಷನ್ ರಾಜ್ಯ ಸಮಿತಿ ಸದಸ್ಯ ಎಂ.ತಿಪ್ಪಯ್ಯಶೆಟ್ಟಿ, ಗೌರವಾಧ್ಯಕ್ಷ ಡಿ.ಎಚ್.ಕಂಬಳಿ, ತಾಲೂಕು ಕಾರ್ಯದರ್ಶಿ ಆದಿಲಕ್ಷ್ಮೀ, ತಾಲೂಕು ಅಧ್ಯಕ್ಷೆ ಗಿರಿಜಮ್ಮ, ಯಮನಮ್ಮ, ಸರಸ್ವತಿ, ವಿಜಯಲಕ್ಷ್ಮೀ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net