ಎಲ್ಲ ಕ್ಷೇತ್ರದಲ್ಲಿಯೂ ಲಯನ್ಸ್ ಸೇವೆ: ಮಾಜಿ ಗರ್ವನರ್ ಡಾ.ನಾಗರಾಜ ವಿ.ಭೈರಿ ಹೇಳಿಕೆ

1 (2)
Published on

ಮಂಡ್ಯ: ನಮ್ಮ ಸಂಸ್ಥೆ ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸೇವೆ ಮಾಡುತ್ತಿದ್ದೇವೆ ಎಂದು ಲಯನ್ಸ್‌ನ ಮಲ್ಟಿಪಲ್ ಕೌನ್ಸಿಲ್‌ನ ಮಾಜಿ ಗರ್ವನರ್ ಡಾ.ನಾಗರಾಜ ವಿ.ಭೈರಿ ತಿಳಿಸಿದರು.

ನಗರದ ಸೇವಾಕಿರಣ ವೃದ್ಧಾಶ್ರಮದಲ್ಲಿ ಅಂತಾರಾಷ್ಟ್ರೀಯ ಲಯನ್ಸ್, ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಎಂ.ಲೋಕೇಶ್ ಮತ್ತು ತಂಡದ ಪದಾಧಿಕಾರಿಗಳ ಪದಗ್ರಹಣ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ಕೇವಲ ಶೇ.35ರಷ್ಟು ಅಂಕ ಬಂದರೆ ಸಾಕು ಎನ್ನುವ ಪರಿಸ್ಥಿತಿ ಇತ್ತು. ಆದರೆ ಈಗ ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳೂ ಸ್ಪರ್ಧೆಗಿಳಿದಿವೆ. ಇದು ಆರೋಗ್ಯಕರ ಬೆಳವಣಿಗೆಯಾಗಿದೆ. ಇದರಿಂದಾಗಿ ಶೇ.85ರಷ್ಟು ಶಿಕ್ಷಿತರು ಇದ್ದಾರೆ. ಹಿಂದೆ ಸಾಕ್ಷರತೆ ಕಡಿಮೆ ಇತ್ತು. ಈಗ ಸಾಕ್ಷರತೆಯ ಪ್ರಮಾಣವೂ ಏರಿಕೆಯಾಗಿದೆ. ಇದು ಖುಷಿಯ ಸಂಗತಿಯಾಗಿದೆ ಎಂದರು.

ಕೃಷಿಕ್ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು, ಕ್ಷೇತ್ರ ಶಿಕ್ಷಣಾಧಿಕಾರಿ ಉದಯಕುಮಾರ್ ಮಾತನಾಡಿದರು. ಅಮೃತ ಲಯನ್ಸ್ ಅಧ್ಯಕ್ಷ ಎಂ.ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂತೀಯ ಅಧ್ಯಕ್ಷ ಬಿ.ಆರ್.ಚಂದ್ರಶೇಖರ್, ವಲಯಾಧ್ಯಕ್ಷ ಪ್ರಕಾಶ್, ವಕೀಲ ಗುರುಪ್ರಸಾದ್, ನಾಗರಾಜು, ವಿ.ಮಂಜುಳಾ, ವಿಜಯ, ಸವಿತಾ ಇತರರಿದ್ದರು. ಇದೇ ವೇಳೆ ಕೀಲಾರ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಅರ್ಜುನ್‌ಕುಮಾರ್, ಪತ್ರಕರ್ತೆ ಆರ್.ಸುಮಾ ಪುರುಷೋತ್ತಮ್ ಅವರನ್ನು ಸನ್ಮಾನಿಸಿ ಗೌರವಿಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net