

ಮಂಗಳೂರು: ರಾಷ್ಟ್ರಪತಿ ಸೇವಾ ಪದಕ ಪಡೆದ ಬಜಪೆ ಪೊಲೀಸ್ ಠಾಣೆಯ ಎಎಸ್ಐ ರಾಮ ಪೂಜಾರಿ ಮೇರಮಜಲು ಅವರನ್ನು ಪೆರ್ಮುದೆ ಸೈಂಟ್ ಜಾನ್ ಬ್ಯಾಪ್ಟಿಸ್ಟ್ ಚರ್ಚ್ನ ಸೇವಾ ಆಯೋಗದ ವತಿಯಿಂದ ಚರ್ಚ್ನ ಸಭಾಭವನದಲ್ಲಿ ಸನ್ಮಾನಿಸಲಾಯಿತು.
ಮಂಗಳೂರು ಧರ್ಮಪ್ರಾಂತ್ಯದ ಮಾಜಿ ಬಿಷಪ್ ಧರ್ಮಗುರು ಆಲೋಶಿಯಸ್ ಪಾವ್ ಡಿ’ಸೋಜಾ, ರುಡೋಲ್ಪ್ ರವಿ ಡೇಸಾ, ರೊನಾಲ್ಡ್ ಪಿಂಟೋ, ವಿನ್ಸೆಂಟ್, ಸಿಪ್ರಿಯನ್, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಹೆನ್ರಿ ಡಿಕುನ್ಹಾ, ಕಾರ್ಯದರ್ಶಿ ಡೊಲ್ಪಿ ಪಿಂಟೋ, ಸಾಕ್ಷಿ ಆಯೋಗದ ಅಧ್ಯಕ್ಷ ಆಲ್ಪೋನ್ಸ್ ಫರ್ನಾಂಡಿಸ್, ಕಾರ್ಯದರ್ಶಿ ಡೋನಿ ರೊಡ್ರಿಗಸ್, ಸದಸ್ಯರಾದ ಮಾರ್ಕ್ ಡಿಸೋಜಾ, ಜಾರ್ಜ್ ಫರ್ನಾಂಡಿಸ್, ನೊವೆಲ್ ಪಿಂಟೊ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಎಂಎನ್ಜಿ-3ಜು. ರಾಮ ಪೂಜಾರಿ
ಪೊಲೀಸ್ ಸೇವೆಯಲ್ಲಿ ಅತ್ಯುತ್ತಮ ಸೇವೆಗೈದು ರಾಷ್ಟ್ರಪತಿ ಸೇವಾ ಪದಕ ಪಡೆದ ಬಜಪೆ ಪೊಲೀಸ್ ಠಾಣೆಯ ಎಎಸ್ಐ ರಾಮ ಪೂಜಾರಿ ಮೇರಮಜಲು ಅವರನ್ನು ಪೆರ್ಮುದೆ ಸೈಂಟ್ ಜಾನ್ ಬ್ಯಾಪ್ಟಿಸ್ಟ್ ಚರ್ಚ್ನ ಸೇವಾ ಆಯೋಗದ ವತಿಯಿಂದ ಸನ್ಮಾನಿಸಲಾಯಿತು.