

ಚಳ್ಳಕೆರೆ: ಬಹುಸಂಖ್ಯಾತ ಮಾದಿಗ ಸಮುದಾಯ ಅಂಬೇಡ್ಕರ್ ಆಶಯದಂತೆ ಶೈಕ್ಷಣಿಕ ಪ್ರಗತಿಯಲ್ಲಿ ಸಮಾಜದ ಮುಖ್ಯವಾಹಿನಿಗೆ ಬರುವ ನಿಟ್ಟಿನಲ್ಲಿ ಜಾಾಗೃತಿ ಅಗತ್ಯವಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ತಾಲೂಕು ಮಾದಿಗ ನೌಕರರ ಸಾಂಸ್ಕೃತಿಕ ಸಂಘ ನಗರದ ಅನಂತನಾಥ ಜೈನಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಭಾವಂತರನ್ನು ಗುರುತಿಸಿ ಸನ್ಮಾನಿಸುವುದರಿಂದ ಇತರ ವಿದ್ಯಾರ್ಥಿಗಳ ಸಾಧನೆಗೆ ಪ್ರೇರಣೆ ಆಗುತ್ತದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಪ್ರತಿಭಾವಂತರಾಗಿ ರೂಪಿಸುವ ವಿಶ್ವ ವಿದ್ಯಾನಿಲಯಗಳು ಸ್ಥಾಪಿತವಾಗಬೇಕು ಎಂದರು.
ಸ್ಪರ್ಧಾ ಸಮಾಜದಲ್ಲಿ ಬಯಸಿದ್ದೆಲ್ಲವನ್ನೂ ಶಿಕ್ಷಣದ ಸಾಧನೆಯಲ್ಲಿ ಧಕ್ಕಿಸಿಕೊಳ್ಳುವ ಅವಕಾಶ ಇದೆ ಎನ್ನುವುದು ವಿದ್ಯಾರ್ಥಿಗಳ ಸಂಕಲ್ಪ ಆಗಬೇಕು. ಸಮುದಾಯದ ನೌಕರಸ್ಥರು ತಮ್ಮ ಜಾತಿ ಮಕ್ಕಳ ಶೈಕ್ಷಣಿ ಪ್ರಗತಿಗೆ ಕೊಡುಗೆ ನೀಡಬೇಖು ಎಂದು ಹೇಳಿದರು.
ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಕೆ.ಜಿ.ಜಗದೀಶ್, ನಿವೃತ್ತ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ತಾಲೂಕು ಮಾದಿಗ ನೌಕರರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಿ. ದಯಾನಂದ, ಉಪನ್ಯಾಸಕ ಡಾ.ಬಿ.ಎಂ. ಗುರುನಾಥ್, ನಗರಸಭೆ ಪೌರಾಯುಕ್ತ ಸಿ. ಚಂದ್ರಪ್ಪ, ಕೆ.ವೀರಭದ್ರಯ್ಯ, ಸಿ.ಬಿ.ಜಯಲಕ್ಷ್ಮೀ, ಟಿ. ವಿಜಯಕುಮಾರ್, ಸಿ.ಜಿ. ಜಯಕುಮಾರ್, ಬಿ.ಪಿ.ಪ್ರಕಾಶಮೂರ್ತಿ, ಎಚ್.ಸಮರ್ಥರಾಯ, ಎಸ್.ಬಿ. ತಿಪ್ಪೇಸ್ವಾಮಿ, ಎಚ್. ತಿಪ್ಪೇಸ್ವಾಮಿ, ಮಲ್ಲಕ್ಕ, ಡಿ.ಟಿ.ಶ್ರೀನಿವಾಸನ್, ಬಿ.ಟಿ.ಹನುಮಂತರಾಯ, ಎಸ್.ಆರ್. ರಂಗಸ್ವಾಮಿ, ಟಿ. ದುರುಗಪ್ಪ, ಎ. ಚನ್ನಕೇಶವ, ಸಿದ್ದಲಿಂಗಮ್ಮ, ಕೆ.ಬಿ. ನಾಗರಾಜ, ಭೀಮಣ್ಣ, ಭದ್ರಿ ಇದ್ದರು.